alex Certify ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ಸೀಟ್ ಖಚಿತಪಡಿಸಿಕೊಳ್ಳಲು ಬರಲಿದೆ ‘ಸೂಪರ್ ಅಪ್ಲಿಕೇಷನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ಸೀಟ್ ಖಚಿತಪಡಿಸಿಕೊಳ್ಳಲು ಬರಲಿದೆ ‘ಸೂಪರ್ ಅಪ್ಲಿಕೇಷನ್ʼ

ರೈಲು ಪ್ರಯಾಣಕ್ಕಾಗಿ ನಿಮ್ಮ ಟಿಕೆಟ್ ದೃಢೀಕರಣ ಬಗ್ಗೆ ಇದ್ದ ಕಳವಳವನ್ನು ಭಾರತೀಯ ರೈಲ್ವೇ ಮುಂಬರುವ ದಿನಗಳಲ್ಲಿ ಶಮನಗೊಳಿಸಲಿದೆ. ಪ್ರಯಾಣಿಕರ ಬೇಡಿಕೆ ಮತ್ತು ಪೂರೈಕೆ ನಡುವಿನ ಸ್ಪಷ್ಟವಾದ ಅಂತರವನ್ನು ಕಡಿಮೆ ಮಾಡಲು, ರೈಲ್ವೆಯು ಡಿಸೆಂಬರ್‌ನಲ್ಲಿ ಎಲ್ಲರಿಗೂ ದೃಢೀಕೃತ ಟಿಕೆಟ್‌ಗಳನ್ನು ನೀಡಲಿದೆ. ವರದಿಯ ಪ್ರಕಾರ ಭಾರತೀಯ ರೈಲ್ವೆಯ ‘ಸೂಪರ್ ಆಪ್’ ನಿಂದ ಇದು ಸಾಧ್ಯವಾಗಲಿದೆ.

ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿರುವ ಈ ಮಹತ್ವಾಕಾಂಕ್ಷೆಯ ಉಪಕ್ರಮದ ಮೊದಲ ಹಂತದಲ್ಲಿ ದೃಢೀಕೃತ ಟಿಕೆಟ್‌ಗಳು ಆಯ್ದ ಐದು ರೈಲು ಮಾರ್ಗಗಳಲ್ಲಿ ಲಭ್ಯವಾಗಲಿವೆ. ಈ ಆಯ್ದ ಮಾರ್ಗಗಳು 500 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತವೆ.

‘ಸೂಪರ್ ಆಪ್ ‘ನಲ್ಲಿ ಕನಿಷ್ಠ 90 ಪ್ರತಿಶತ ಟಿಕೆಟ್ ಕಾಯ್ದಿರಿಸುವುದನ್ನು ನಿಗದಿಪಡಿಸುವುದು ವ್ಯವಸ್ಥೆಯ ಗುರಿಯಾಗಿದೆ. ಅಪ್ಲಿಕೇಶನ್‌ನಿಂದ ಬಳಕೆದಾರರು ಈ ಕುರಿತು ವಿವರಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ವರದಿಯ ಪ್ರಕಾರ, ಪ್ರಾಯೋಗಿಕ ಹಂತವನ್ನು ಜಾರಿಗೊಳಿಸುವ ಮಾರ್ಗಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ಆಯ್ದ ಹಳಿಗಳಲ್ಲಿ ಚಲಿಸುವ ಎಲ್ಲಾ ಜನಪ್ರಿಯ ರೈಲುಗಳಲ್ಲಿ, ದೃಢೀಕೃತ ಸೀಟುಗಳಿಗಾಗಿ ಒಂದು ಗಂಟೆಯ ಮಧ್ಯಂತರದಲ್ಲಿ ಮತ್ತೊಂದು ರೈಲು ಓಡಿಸಲಾಗುವುದು. ಹೊರಗುಳಿದಿರುವವರು ಈ ಹೆಚ್ಚುವರಿ ರೈಲುಗಳಲ್ಲಿ ತಮ್ಮ ದೃಢೀಕೃತ ಸೀಟುಗಳನ್ನು ಪಡೆಯುತ್ತಾರೆ.

ಕಾಯುವ ಟಿಕೆಟ್‌ಗಳನ್ನು ಹೊಂದಿರುವ ಜನರ ವರ್ಗಕ್ಕೆ ಅನುಗುಣವಾಗಿ ಈ ರೈಲಿನ ಕೋಚ್‌ಗಳನ್ನು ನಿಯೋಜಿಸಲಾಗುವುದು; ಅಂದರೆ ಹೆಚ್ಚಿನ ಜನರು ಸ್ಲೀಪರ್‌ ಕೋಟ್ ಗಳಿಗಾಗಿ ಕಾಯುವ ಟಿಕೆಟ್‌ಗಳನ್ನು (waiting tickets) ಹೊಂದಿದ್ದರೆ, ಈ ವರ್ಗದ ಕೋಚ್‌ಗಳು ಹೆಚ್ಚಿನ ಕೋಚ್‌ಗಳನ್ನು ಒಳಗೊಂಡಿರುತ್ತವೆ.

ರೈಲ್ವೆ ಅಧಿಕಾರಿಗಳ ಪ್ರಕಾರ ರೈಲಿನಲ್ಲಿ ಹೆಚ್ಚು ಎಸಿ ಕೋಚ್‌ಗಳು ಇದ್ದಾಗ ಸ್ಲೀಪರ್ ಟಿಕೆಟ್ ಹೊಂದಿರುವ ಬಳಕೆದಾರರು ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ, ಪ್ರಯಾಣಿಕರು ಪ್ರತ್ಯೇಕ ಟಿಕೆಟ್ ಖರೀದಿಸಬೇಕಾಗಿಲ್ಲ ಅಥವಾ ಎಸಿ ಟಿಕೆಟ್‌ಗಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...