ಬಾಂಗ್ಲಾದೇಶದಲ್ಲಿ ಧಗ ಧಗ ; ಸ್ಟಾರ್ ಕ್ರಿಕೆಟಿಗನ ಮನೆಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು ..!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಸಂಸದೀಯ ಚುನಾವಣೆ ಮುಗಿದ ನಂತರ ಬಾಂಗ್ಲಾದೇಶದಲ್ಲಿ ಗಲಭೆಗಳು ನಡೆಯುತ್ತಿವೆ. ಶೇಖ್ ಹಸೀನಾ ಕಾನೂನುಬಾಹಿರವಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಇದಲ್ಲದೆ, ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗಗಳಲ್ಲಿ ಕೋಟಾ ವ್ಯವಸ್ಥೆ. ಇದು ಅವರ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಪತನಕ್ಕೆ ಕಾರಣವಾಯಿತು. ನಿನ್ನೆ ಶೇಖ್ ಹಸೀನಾ ಅವರ ಮನೆ ಲೂಟಿ ಮಾಡಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಲ್ಲದೇ ಅವರ ನಿವಾಸದಲ್ಲಿ ಪ್ರತಿಭಟನಾಕಾರರು ಮನಸ್ಸಿಗೆ ಬಂದ ಹಾಗೆ ದುಷ್ಕ್ರತ್ಯ ಎಸಗಿದ್ದಾರೆ.

ಅವಾಮಿ ಲೀಗ್ ಸಂಸದ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ನ ಮಾಜಿ ನಾಯಕ ಮುಷ್ರಾಫೆ ಮೊರ್ತಾಜಾ ಅವರ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಬಂಗಲೆಗೆ ಬೆಂಕಿ ಹಚ್ಚಲಾಯಿತು. ಪ್ರತಿಭಟನಾಕಾರರು ಮೊರ್ತಾಜಾ ಅವರ ಮನೆಗೆ ನುಗ್ಗಿ ಅವರ ಮನೆಯ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದರು. ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಬಾಂಗ್ಲಾದೇಶದ ಕ್ರಿಕೆಟ್ ನ ಮಾಜಿ ನಾಯಕ ಮುಷ್ರಾಫೆ ಮೊರ್ತಾಜಾ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು, ನಿವಾಸ ಸುಟ್ಟು ಭಸ್ಮವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read