ಮಳೆ ಕಡಿಮೆಯಾಗಲೆಂದು ಪ್ರಾರ್ಥಿಸಿ ಕಳಸೇಶ್ವರನ ಮೊರೆಹೋದ ಚಿಕ್ಕಮಗಳೂರಿನ ಜನ….!

ಈ ಬಾರಿ ದೇಶದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದಲ್ಲಿ ಮುನ್ನೂರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲೂ ಮಳೆ ವ್ಯಾಪಕ ಹಾನಿಯನ್ನು ಉಂಟು ಮಾಡಿದ್ದು, ಶಿರೂರಿನಲ್ಲಿ ಗುಡ್ಡ ಕುಸಿತದ ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಒಂದಷ್ಟು ಮಳೆ ಕಡಿಮೆಯಾಗಿದ್ದರೂ ಸಹ ಕೆಲವು ಭಾಗಗಳಲ್ಲಿ ಇನ್ನೂ ಸಹ ಮುಂದುವರೆದಿದೆ. ಇದರ ಪರಿಣಾಮ ರೈತರು ಬೆಳೆದ ಬೆಳೆ ನಷ್ಟವಾಗಿದ್ದು, ಜೊತೆಗೆ ಗುಡ್ಡ ಪ್ರದೇಶಗಳು ಕುಸಿಯುವ ಭೀತಿ ವ್ಯಕ್ತವಾಗಿದೆ. ಜೊತೆಗೆ ಹಳ್ಳಕೊಳ್ಳಗಳು, ನದಿ, ಕೆರೆ ಕಟ್ಟೆಗಳು ತುಂಬಿದ್ದು, ರಸ್ತೆ ಮೇಲೂ ನೀರು ಹರಿಯುತ್ತಿರುವುದರಿಂದ ಸಂಚಾರ ದುಸ್ತರವಾಗಿದೆ.

ಈ ಬಾರಿಯ ವ್ಯಾಪಕ ಮಳೆಯಿಂದ ಚಿಕ್ಕಮಗಳೂರು ಜನ ತತ್ತರಿಸಿ ಹೋಗಿದ್ದು, ಅದರಲ್ಲೂ ಶೃಂಗೇರಿ, ಕಳಸ, ಹೊರನಾಡು, ಕೊಪ್ಪ ಮೊದಲಾದ ಕಡೆ ವಾರಗಟ್ಟಲೆ ವಿದ್ಯುತ್ ಕಡಿತಗೊಂಡಿದ್ದು, ಭಾರಿ ಗಾಳಿ ಕಾರಣ ಅಡಿಕೆ ಮರಗಳು ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಭಕ್ತರು ಮಳೆ ಕಡಿಮೆಯಾಗಲೆಂದು ಪ್ರಾರ್ಥಿಸಿ ಕಳಸದ ಕಳಸೇಶ್ವರನ ಮೊರೆ ಹೋಗಿದ್ದಾರೆ.

ಕಳಸದ ಕಳಸೇಶ್ವರ ದೇಗುಲಕ್ಕೆ ಆಗಮಿಸಿದ ಭಕ್ತರು ಅಗಿಲು ಸೇವೆ ಸಲ್ಲಿಸಿದ್ದು, ಮಳೆಯನ್ನು ಕಡಿಮೆ ಮಾಡುವಂತೆ ಪ್ರಾರ್ಥಿಸಿದ್ದಾರೆ. ಮಳೆ ಕಡಿಮೆಯಾದರೆ ತಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಭಕ್ತರು ಈ ಪೂಜೆ ನೆರವೇರಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read