VIRAL VIDEO: ‘ವರದಕ್ಷಿಣೆ’ ಕೇಳಿದ್ದಕ್ಕೆ ಶಾಸ್ತಿ; ವರನನ್ನು ಕುರ್ಚಿಗೆ ಕಟ್ಟಿ ಅವಮಾನಿಸಿದ ವಧು…!

ವರದಕ್ಷಿಣೆ ಕೇಳುವುದು ಹಾಗೂ ನೀಡುವುದು ಅಪರಾಧ ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಇಷ್ಟಾದರೂ ಸಹ ವರದಕ್ಷಿಣೆ ಕೇಳುವುದು ಇನ್ನೂ ಪೂರ್ಣವಾಗಿ ನಿಂತಿಲ್ಲ. ಮದುವೆಗೆ ಮುನ್ನ ಪಡೆದುಕೊಂಡಿದ್ದು ಸಾಲದೆಂಬಂತೆ ತಾಳಿ ಕಟ್ಟುವ ಮೊದಲು ಸಹ ಮತ್ತಷ್ಟು ವರದಕ್ಷಿಣೆಗೆ ಡಿಮ್ಯಾಂಡ್ ಮಾಡಲಾಗುತ್ತದೆ. ಕೆಲವರು ಮದುವೆಯಾಗಿ ವರ್ಷಗಳ ಕಾಲ ಸಂಸಾರ ನಡೆಸಿದರೂ ತವರು ಮನೆಯಿಂದ ಹಣ ತರುವಂತೆ ತಮ್ಮ ಪತ್ನಿಯನ್ನು ಪೀಡಿಸುವ ಸಾಕಷ್ಟು ಪ್ರಕರಣಗಳು ಸಹ ನಡೆದಿವೆ.

ಇದರ ಮಧ್ಯೆ ಮದುವೆ ನಿಶ್ಚಯಗೊಂಡ ಸಂದರ್ಭದಲ್ಲಿ ಕೆಲವರು ವರದಕ್ಷಿಣೆ ಪಡೆದುಕೊಂಡು ಬಳಿಕ ತಾಳಿ ಕಟ್ಟುವ ಸಂದರ್ಭದಲ್ಲಿ ಮತ್ತಷ್ಟಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಈ ವೇಳೆ ನೀಡಲು ವಿಫಲರಾದರೆ ಮದುವೆಯನ್ನೇ ಮುರಿದುಕೊಳ್ಳಲು ಮುಂದಾಗುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಈಗಾಗಲೇ ನಡೆದಿದ್ದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿರುವ ವಿಡಿಯೋ ಒಂದು ವಿಭಿನ್ನವಾಗಿದೆ. ತಾಳಿ ಕಟ್ಟುವ ಮುನ್ನ ಮತ್ತಷ್ಟು ವರದಕ್ಷಿಣೆಗೆ ಬೇಡಿಕೆ ಇಟ್ಟ ವರ ಮತ್ತಾತನ ತಂದೆಗೆ ವಧುವಿನ ಕುಟುಂಬ ವಿಭಿನ್ನ ರೀತಿಯಲ್ಲಿ ಬುದ್ದಿ ಕಲಿಸಲು ಮುಂದಾಗಿದೆ.

ವರ ಮತ್ತು ಆತನ ತಂದೆಯನ್ನು ವಧು – ವರರಿಗೆ ಮದುವೆ ಮಂಟಪದಲ್ಲಿ ಇರಿಸಲಾಗಿದ್ದ ಕುರ್ಚಿಗೆ ಕಟ್ಟಿ ಹಾಕಿದ್ದು, ಮತ್ತಷ್ಟು ವರದಕ್ಷಿಣೆ ಬೇಕಾ ಎಂದು ವಧು ಮತ್ತಾಕೆಯ ಕುಟುಂಬದವರು ಅವಮಾನಿಸಿದ್ದಾರೆ. ಅಲ್ಲದೆ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಾರೆ. Mr Dr Bittu Sharma ಎಂಬ ಯುಟ್ಯೂಬ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಧು ಕುಟುಂಬ ಮಾಡಿದ್ದು ಸರಿ ಎಂದು ಹೇಳಿದರೆ ಮತ್ತೆ ಹಲವರು ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು, ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read