Shocking Video : ವೃದ್ಧೆ ಮೇಲೆ ಏಕಾಏಕಿ ಬೀದಿ ನಾಯಿಗಳ ದಾಳಿ; ಬೆಚ್ಚಿಬೀಳಿಸುವಂತಿದೆ ಈ ದೃಶ್ಯ…!

ನಾಯಿಗಳ ಗುಂಪೊಂದು ವೃದ್ಧೆಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಯ ಹುಟ್ಟಿಸಿದೆ.

ಈ ಘಟನೆ ವಿದೇಶದಲ್ಲಿ ನಡೆದಿದೆ. ಮಹಿಳೆ ಶಾಪಿಂಗ್‌ ಕಾರ್ಟ್‌ ನೊಂದಿಗೆ ರಸ್ತೆಯಲ್ಲಿ ನಿಂತಿದ್ದಾಳೆ. ಆಗ ಎಲ್ಲಂದಲೋ ಓಡಿ ಬರುವ ನಾಲ್ಕೈದು ನಾಯಿಗಳು ಆಕೆ ಮೇಲೆ ದಾಳಿ ನಡೆಸುತ್ತವೆ. ಕಾರ್ಟ್‌ ಹಿಡಿದು ನಾಯಿ ಓಡಿಸುವ ಪ್ರಯತ್ನವನ್ನು ವೃದ್ಧೆ ಮಾಡುತ್ತಾಳೆ. ಆದ್ರೆ ನಾಯಿಯೊಂದು ಆಕೆ ಕೈಗೆ ಕಚ್ಚುತ್ತದೆ. ನಂತ್ರ ಕೂದಲನ್ನು ಕಚ್ಚಿ ಎಳೆಯಲು ಶುರು ಮಾಡುತ್ವೆ.

ವೃದ್ಧ ಮಹಿಳೆ ಸಹಾಯಕ್ಕೆ ಕೂಗಿಕೊಳ್ತಾಳೆ. ಈ ವೇಳೆ ಮಹಿಳೆಯೊಬ್ಬಳು ಪೊರಕೆ ಹಿಡಿದು ಬರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಈ ವೇಳೆ ನಾಯಿಗಳು ಅಲ್ಲಿಂದ ಓಡಿ ಹೋಗುತ್ವೆ. ಸಿಲ್ವಿಯಾಮಸೆಡೋರಮಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಜನರು ದಂಗಾಗಿದ್ದಾರೆ. ಬೀದಿ ನಾಯಿಗಳು ಹಾಗೂ ದನಗಳ ಕಾಟ ಹೆಚ್ಚಾಗ್ತಿದೆ. ಅದರ ನಿಯಂತ್ರಣಕ್ಕೆ ಸರ್ಕಾರಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿವೆ.

ಕೆಲ ದಿನಗಳ ಹಿಂದಷ್ಟೆ ಬೀದಿ ದನಗಳು ಮಹಿಳೆ ಮೇಲೆ ದಾಳಿ ನಡೆಸಿದ್ದ ವಿಡಿಯೋ ವೈರಲ್‌ ಆಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read