HomeIndiaಮದುವೆಯಾಗಿ ಮಗುವಿದ್ದರೂ ಮರೆಯದ ಬಾಲ್ಯದ ಪ್ರೀತಿ; ಆಕೆಯ ಗೆಳೆಯನೊಂದಿಗೆ ಪತ್ನಿ ಮದುವೆ ನೆರವೇರಿಸಿದ ಪತಿ...!

ಮದುವೆಯಾಗಿ ಮಗುವಿದ್ದರೂ ಮರೆಯದ ಬಾಲ್ಯದ ಪ್ರೀತಿ; ಆಕೆಯ ಗೆಳೆಯನೊಂದಿಗೆ ಪತ್ನಿ ಮದುವೆ ನೆರವೇರಿಸಿದ ಪತಿ…!

ಮಹಿಳೆಯೊಬ್ಬಳು ತನಗೆ ಮದುವೆಯಾಗಿ ಒಂದು ಮಗು ಇದ್ದರೂ ಸಹ ಬಾಲ್ಯದಲ್ಲಿ ಪ್ರೀತಿಸುತ್ತಿದ್ದ ಗೆಳೆಯನನ್ನು ಮರೆಯದೆ ಆತನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಈ ವಿಚಾರ ತಿಳಿದ ಆಕೆಯ ಪತಿ ತನ್ನ ಪತ್ನಿ ಇಷ್ಟಪಟ್ಟವನೊಂದಿಗೆ ಮತ್ತೊಮ್ಮೆ ಅವಳ ಮದುವೆ ನೆರವೇರಿಸಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.

ಘಟನೆಯ ವಿವರ: 2021 ರಲ್ಲಿ 22 ವರ್ಷದ ಖುಷ್ಬು ಕುಮಾರಿ ಎಂಬಾಕೆಯ ಮದುವೆ ಬಿಹಾರದ ಲಖೀಸರಾಯ್ ಜಿಲ್ಲೆಯ 26 ವರ್ಷದ ರಾಜೇಶ್ ಕುಮಾರ್ ಜೊತೆ ನೆರವೇರಿತ್ತು. ದಂಪತಿಗೆ ಒಂದು ಮಗು ಸಹ ಇದ್ದು, ಇಷ್ಟಾದರೂ ಖುಷ್ಬು ಕುಮಾರಿ ತಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ತನ್ನದೇ ಊರಿನ 24 ವರ್ಷದ ಚೇತನ್ ಕುಮಾರ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಳು.

ಇತ್ತೀಚೆಗೆ ಚೇತನ್ ಕುಮಾರ್, ಖುಷ್ಬು ಕುಮಾರಿ ಮನೆಗೆ ಆಕೆಯ ಪತಿ ಹಾಗೂ ಕುಟುಂಬಸ್ಥರು ಇಲ್ಲದ ಸಂದರ್ಭದಲ್ಲಿ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಆಗಮಿಸಿದ ರಾಜೇಶ್ ಕುಮಾರ್ ಪೋಷಕರು ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ವಿಚಾರ ರಾಜೇಶ್ ಕುಮಾರ್ ಕಿವಿಗೂ ಸಹ ತಲುಪಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸುದ್ದಿ ತಿಳಿದು ಮೊದಲಿಗೆ ರಾಜೇಶ್ ಕುಮಾರ್ ವಿಚಲಿತನಾದರೂ ಸಹ ಬಳಿಕ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದಾನೆ. ತನ್ನ ಊರಿನ ಹಿರಿಯರನ್ನು ಕರೆಸಿ, ಅವರ ಬಳಿ ಸಂಪೂರ್ಣ ವಿಷಯ ಹೇಳಿದ್ದು, ತಾನು ತನ್ನ ಪತ್ನಿಯ ವಿವಾಹವನ್ನು ಆಕೆ ಈ ಮೊದಲೇ ಪ್ರೀತಿಸುತ್ತಿದ್ದ ಚೇತನ್ ಕುಮಾರ್ ಜೊತೆ ನೆರವೇರಿಸಲು ಸಿದ್ಧವಿರುವುದಾಗಿ ಹೇಳಿದ್ದಾನೆ.

ಅಂತಿಮವಾಗಿ ರಾಜೇಶ್ ಕುಮಾರ್ ಪೋಷಕರು ಹಾಗೂ ಗ್ರಾಮದ ಹಿರಿಯರ ಒಪ್ಪಿಗೆ ಮೇರೆಗೆ ಕಳೆದ ವಾರ ಖುಷ್ಬು ಕುಮಾರಿ ಹಾಗೂ ಚೇತನ್ ಕುಮಾರ್ ವಿವಾಹ ನೆರವೇರಿದ್ದು, ಆದರೆ ತನ್ನ ಮಗುವಿನೊಂದಿಗೆ ಅತೀವ ಭಾಂದವ್ಯ ಹೊಂದಿರುವ ರಾಜೇಶ್ ಕುಮಾರ್ ಮಗುವನ್ನು ತಾನೇ ಸಾಕುವುದಾಗಿ ಹೇಳಿದ್ದಾನೆ. ಈ ಅಪರೂಪದ ವಿವಾಹ ಈಗ ಅಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಖುಷ್ಬುಕುಮಾರಿ ತನ್ನ ಹೊಸ ಪತಿ ಜೊತೆ ಸಂಸಾರ ರಥ ಸಾಗಿಸಲು ತೆರಳಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular