Viral Video: ಕೇವಲ ಟವೆಲ್ ಕಟ್ಟಿಕೊಂಡು ರಸ್ತೆಗಿಳಿದ ಯುವತಿ; ಬೇಕೆಂದೆ ಜಾರಿಸಿದಾಗ ಹೌಹಾರಿದ ಜನ…!

ಮಾಯಾ ನಗರಿ ಮುಂಬೈನಲ್ಲಿ ಇತ್ತೀಚೆಗೆ ನಾಟಕೀಯ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ಕೇವಲ ಟವೆಲ್ ಕಟ್ಟಿಕೊಂಡು ಜನನಿಬಿಡ ರಸ್ತೆಗೆ ಇಳಿದಿದ್ದು, ಆಕೆಯ ಈ ಬಿಂದಾಸ್ ವರ್ತನೆಯಿಂದ ದಾರಿಹೋಕರು ಬೆರಗಾಗಿದ್ದಾರೆ. ಅಷ್ಟೇ ಅಲ್ಲ, ಹೀಗೆ ನಡೆದುಕೊಂಡು ಹೋಗುತ್ತಿದ್ದ ಆಕೆ ಬೇಕೆಂದೇ ಒಮ್ಮೆ ಟವೆಲ್ ಜಾರಿಸಿದಾಗ ಹೌಹಾರಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಿಂತ್ರಾ ಫ್ಯಾಶನ್ ಸೂಪರ್ ಸ್ಟಾರ್ ವಿಜೇತೆ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ತನುಮಿತಾ ಘೋಷ್ ಇಂತಹದೊಂದು ಬಿಂದಾಸ್ ನಡವಳಿಕೆ ತೋರಿದ್ದು, ಆಗಷ್ಟೇ ಸ್ನಾನ ಮುಗಿಸಿಕೊಂಡು ಬಂದಂತಿದ್ದ ಆಕೆ ಶೂ ಧರಿಸಿ ತನ್ನ ದೇಹಕ್ಕೆ ಟವೆಲ್ ಸುತ್ತಿಕೊಂಡು ರಸ್ತೆಗೆ ಇಳಿದಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಕೇವಲ ಟವೆಲ್ ಧರಿಸಿ ಹೋಗುತ್ತಿದ್ದ ಆಕೆಯನ್ನು ಜನ ಅಚ್ಚರಿಯಿಂದ ನೋಡಿದ್ದಾರೆ.

ಇದ್ಯಾವುದಕ್ಕೂ ಡೋಂಟ್ ಕೇರ್ ಎಂಬಂತೆ ನಡೆದುಕೊಂಡು ಹೋಗುತ್ತಿದ್ದ ಆಕೆ ಒಮ್ಮೆ ಬೇಕೆಂದೇ ಟವೆಲ್ ಜಾರಿಸಿದ್ದು, ಇದರಿಂದ ಸುತ್ತಮುತ್ತಲು ಇದ್ದವರು ಒಂದು ಕ್ಷಣ ಗಾಬರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 37 ಸಾವಿರಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಆಕೆ ತನ್ನ ಈ ವಿಡಿಯೋವನ್ನು ಹಾಕಿದ್ದು, ಇದು ಈಗಾಗಲೇ 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ತನುಮಿತಾ ಘೋಷ್ ಅವರ ಈ ವಿಡಿಯೋಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read