ಸೈಕಲ್ ಓಡಿಸುವ ಮೂಲಕ ಫೇಮಸ್ ಆಗಿದ್ದ ಮೂವರು ಪುಟ್ಟ ಬಾಲಕಿಯರು ಭೂಕುಸಿತಕ್ಕೆ ಬಲಿ: ವಿಡಿಯೊ ಜೊತೆ ಭಾವುಕ ಪೋಸ್ಟ್ ಹಂಚಿಕೊಂಡ ಶಿಕ್ಷಕಿ

ಒಂದು ವರ್ಷದ ಹಿಂದೆ  ವಯನಾಡಿನ ಮುಂಡಕ್ಕೈನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಶಿಕ್ಷಕಿ, ತನ್ನ ಶಾಲಾ ಮಕ್ಕಳಿಗೆ ಸೈಕಲ್‌ ಕಲಿಸುತ್ತಿದ್ದರು. ಈಗ ಮತ್ತೆ ಅದೇ ಸ್ಥಳ ವೈರಲ್‌ ಆಗಿದೆ. ಆದ್ರೆ ಸ್ಥಳದಲ್ಲಿ ಈಗ ದುಃಖ ಮಡುಗಟ್ಟಿದೆ. ಇಷ್ಟು ದಿನ ಮಕ್ಕಳ ಸಂತೋಷ, ನಗುವಿನಿಂದ ಕೂಡಿದ್ದ ಶಾಲೆ ಮೈದಾನ ಕೆಸರು ಗದ್ದೆಯಾಗಿದೆ.

ಹಳೆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಂಡ ಶಾಲಿನಿ ತಂಕಚನ್, ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. 4ನೇ ತರಗತಿಯ ಶಿಕ್ಷಕಿಯಾಗಿದ್ದ ಶಾಲಿನಿ ತಂಕಚನ್, ಈ ವಿಡಿಯೋ ಪೋಸ್ಟ್‌ ಮಾಡಿ ನನ್ನ ಪ್ರೀತಿ ಪಾತ್ರರು ಹೋದ್ರು ಅಂತ ಬರೆದಿದ್ದಾರೆ. ಸೈಕಲ್‌ ಓಡಿಸುತ್ತಿದ್ದ ಮೂವರು ಸೇರಿದಂತೆ ಭೂಕುಸಿತದಲ್ಲಿ ಒಂಭತ್ತು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.

ಮೈದಾನದಲ್ಲಿ ಸೈಕಲ್‌ ಓಡಿಸುತ್ತಿದ್ದ ವಿಕಲಾಂಗ ವಿದ್ಯಾರ್ಥಿ ಜೊತೆ ನಾನು ಮಾತನಾಡಿದ್ದೆ. ಅಲ್ಲದೆ ಎಲ್ಲರೂ ಖುಷಿಯಿಂದ ಸೈಕಲ್‌ ಓಡಿಸಿದ್ದೆವು. ಈಗ ಈ ವಿಡಿಯೋ ನನಗೆ ನೋಡಲು ಸಾಧ್ಯವಿಲ್ಲ. ಇದ್ರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ ಈ ವರ್ಷ ನಾಲ್ಕನೇ ತರಗತಿ ಪಾಸ್‌ ಆದ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ. ಬಾಲಕಿಯರ ಕುಟುಂಬದ ಒಂದು ಸದಸ್ಯ ಕೂಡ ಬದುಕುಳಿದಿಲ್ಲ. ಇಡೀ ಕುಟುಂಬ ಸಾವನ್ನಪ್ಪಿದೆ. ಶಾಲೆ ಮಕ್ಕಳು, ಪಾಲಕರು, ಶಿಕ್ಷಕರು ಒಂದೇ ಕುಟುಂಬದ ರೀತಿ ಇದ್ದರು ಎಂದು ಶಿಕ್ಷಕಿ ಬರೆದಿದ್ದಾರೆ.

https://twitter.com/NewIndianXpress/status/1818629681421115696?ref_src=twsrc%5Etfw%7Ctwcamp%5Etweetembed%7Ctwterm%5E1818629681421115696%7Ctwgr%5E45b617736a66f6af624c02568491da01c39c8e48%7Ctwcon%5Es1_&ref_url=https%3A%2F%2Fwww.newindianexpress.com%2Fstates%2Fkerala%2F2024%2FJul%2F31%2Fwayanad-tragedy-three-kids-in-viral-school-video-die-in-landslide

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read