HomeEntertainment'ನೀ ನಕ್ಕರ ನನಗ ಅಷ್ಟೇ ಸಾಕು ಕಣೆ' ಚಿತ್ರದ ''ಬಾಗಲಕೋಟೆ ಹುಡುಗ'' ಹಾಡು ರಿಲೀಸ್

‘ನೀ ನಕ್ಕರ ನನಗ ಅಷ್ಟೇ ಸಾಕು ಕಣೆ’ ಚಿತ್ರದ ”ಬಾಗಲಕೋಟೆ ಹುಡುಗ” ಹಾಡು ರಿಲೀಸ್

ಜೂನಿಯರ್ ದರ್ಶನ್ ಎಂದೇ ಖ್ಯಾತಿ ಪಡೆದಿರುವ ಅವಿನಾಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ನೀ ನಕ್ಕರ ನನಗ ಅಷ್ಟೇ ಸಾಕು ಕಣೆ’  ಚಿತ್ರದ ”ಬಾಗಲಕೋಟೆ ಹುಡುಗ” ಎಂಬ ಉತ್ತರ ಕನ್ನಡ ಶೈಲಿಯ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಮಂಜು ಕವಿ ಹಾಗೂ ತನುಶ್ರೀ ಈ ಹಾಡಿಗೆ ಧ್ವನಿಯಾಗಿದ್ದು, ಮಂಜು ಕವಿ ಅವರದ್ದೇ ಸಂಗೀತ ಮತ್ತು ಸಾಹಿತ್ಯವಿದೆ. ಈ ಹಾಡು ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ದರ್ಶನ್ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ.

ಮಂಜು ಕವಿ ನಿರ್ದೇಶನದ ಈ ಚಿತ್ರದಲ್ಲಿ ಅವಿನಾಶ್ ಗೆ ಜೋಡಿಯಾಗಿ ಸಿಂಚನ ಹೆಗಡೆ ಅಭಿನಯಿಸಿದ್ದು, ಎಸ್ ಜೆ ಸಂಜಯ್ ಸಂಕಲನ, ಹಾಗೂ ಸದಾಶಿವ ಹಿರೇಮಠ ಛಾಯಾಗ್ರಹಣವಿದೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular