alex Certify Watch Video: ಇಂತಹ ಅತ್ಯದ್ಭುತ ಆಟವನ್ನು ನೀವೆಂದೂ ನೋಡಿರಲಾರಿರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ಇಂತಹ ಅತ್ಯದ್ಭುತ ಆಟವನ್ನು ನೀವೆಂದೂ ನೋಡಿರಲಾರಿರಿ….!

ಪ್ರಸ್ತುತ ಪ್ಯಾರಿಸ್ ನಲ್ಲಿ ಒಲಂಪಿಕ್ ಪಂದ್ಯಾವಳಿಗಳು ನಡೆಯುತ್ತಿದ್ದು, ಕ್ರೀಡಾ ಪ್ರೇಮಿಗಳಿಗೆ ರಸದೂಟ ನೀಡುತ್ತಿದೆ. ಭಾರತೀಯ ಕ್ರೀಡಾಪಟುಗಳು ಸಹ ಉತ್ತಮ ಸಾಧನೆಯನ್ನು ತೋರುತ್ತಿದ್ದು, ಈಗಾಗಲೇ ಪದಕ ಗಳಿಕೆಯನ್ನು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಮತ್ತಷ್ಟು ಪದಕಗಳ ಬೇಟೆಯಾಡುವ ನಿರೀಕ್ಷೆ ಇದೆ.

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಕ್ರೀಡಾ ಪ್ರೇಮಿಗಳನ್ನು ಅಚ್ಚರಿಗೊಳಿಸಿದೆ. ಅಲ್ಲದೆ ಪರಸ್ಪರ ಎದುರಾಳಿಗಳಾದ ಉಭಯ ತಂಡಗಳ ಆಟಗಾರರ ಅಂತಿಮ ಕ್ಷಣದವರೆಗಿನ ಕೆಚ್ಚೆದೆಯ ಆಟ ನಿಬ್ಬೆರಗಾಗಿಸುವಂತಿದ್ದು, ಇಂತಹ ಜಿದ್ದಾಜಿದ್ದಿನ ಹೋರಾಟವನ್ನು ನಾವು ಈವರೆಗೂ ನೋಡಿರಲಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.

ಕೊರಿಯಾ ಮತ್ತು ಮಲೇಷ್ಯಾ ನಡುವಿನ ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಈ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದ್ದು, ಒಂದು ಪಾಯಿಂಟ್ ಗಾಗಿ ಉಭಯ ತಂಡಗಳ ಆಟಗಾರರು ಭಾರಿ ಪೈಪೋಟಿ ನಡೆಸಿದ್ದಾರೆ. ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಆಟವಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಹಲವರು, ಜೀವನ ಹೋರಾಟವನ್ನು ಸಹ ಇದೇ ರೀತಿ ನಡೆಸಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...