alex Certify ಇಸ್ರೇಲ್, ಕುವೈತ್‌ನಂತಹ ಎರಡೂ ದೇಶಗಳು ಸೇರಿಕೊಂಡರೂ ಮೀರಿಸಲಾಗದಷ್ಟು ದೊಡ್ಡದಾಗಿದೆ ಭಾರತದ ಈ ಜಿಲ್ಲೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಸ್ರೇಲ್, ಕುವೈತ್‌ನಂತಹ ಎರಡೂ ದೇಶಗಳು ಸೇರಿಕೊಂಡರೂ ಮೀರಿಸಲಾಗದಷ್ಟು ದೊಡ್ಡದಾಗಿದೆ ಭಾರತದ ಈ ಜಿಲ್ಲೆ…..!

Kutch District Guide: All you Need to Know

 

ಪ್ರಪಂಚದಲ್ಲೇ ಅತ್ಯಂತ ವೈವಿದ್ಯಮಯವಾದ ದೇಶ ಭಾರತ. ಇಲ್ಲಿನ ಭಾಷೆ, ಆಹಾರ, ಜನಜೀವನ, ಸೌಂದರ್ಯ ಎಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಭಾರತದ ಜಿಲ್ಲೆಯೊಂದು ಇಸ್ರೇಲ್ ಮತ್ತು ಕುವೈತ್‌ನಂತಹ ಎರಡೂ ದೇಶಗಳನ್ನು ಮೀರಿಸುವಷ್ಟು ದೊಡ್ಡದಾಗಿದೆ.

ಭಾರತದ ಒಟ್ಟು ವಿಸ್ತೀರ್ಣ ಎಷ್ಟು?

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಜನಸಂಖ್ಯೆ ಕೂಡ ಅತಿ ಹೆಚ್ಚಾಗಿದೆ. ಗಾತ್ರದಲ್ಲಿ ಭಾರತವು ವಿಶ್ವದಲ್ಲಿ ಏಳನೇ ಸ್ಥಾನದಲ್ಲಿದೆ. ಹಿಮದಿಂದ ಆವೃತವಾದ ಹಿಮಾಲಯದಿಂದ ಪ್ರಾರಂಭವಾಗಿ ಹಿಂದೂ ಮಹಾಸಾಗರದವರೆಗೂ ಭಾರತ ಆವರಿಸಿಕೊಂಡಿದೆ.

ಭಾರತದಲ್ಲಿ 29 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಿವೆ. ಇಲ್ಲಿರುವ ಜಿಲ್ಲೆಗಳ ಸಂಖ್ಯೆ 797. ಇವುಗಳಲ್ಲಿ ರಾಜ್ಯಗಳಲ್ಲಿ 752 ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 45 ಜಿಲ್ಲೆಗಳಿವೆ.

ಭಾರತದ ಅತಿ ದೊಡ್ಡ ಜಿಲ್ಲೆ

ಗುಜರಾತ್ ರಾಜ್ಯದ ಕಚ್ ಜಿಲ್ಲೆ ರಾಜ್ಯದಲ್ಲೇ ಅತಿ ದೊಡ್ಡದಾಗಿದೆ. ಇದರ ವಿಸ್ತೀರ್ಣ 45,674 ಚದರ ಕಿ.ಮೀ. ಇದು ಗುಜರಾತ್‌ನ ಶೇ. 23.27 ರಷ್ಟಿದೆ. ಈ ಜಿಲ್ಲೆ ತನ್ನ ವಿಶಾಲವಾದ ಜವುಗು ಪ್ರದೇಶಕ್ಕೆ ಹೆಸರುವಾಸಿಯಾಗಿದೆ.

ಕಚ್ ಜಿಲ್ಲೆ ವಿಶ್ವದ ಅತಿ ದೊಡ್ಡ ಲವಣಯುಕ್ತ ಮರುಭೂಮಿಯನ್ನು ಹೊಂದಿದೆ. ಇಲ್ಲಿ ಬೇಸಾಯ ಮಾಡಲು ಸಾಧ್ಯವಿಲ್ಲ ಮತ್ತು ಹವಾಮಾನವು ಎಲ್ಲಾ ಸಮಯದಲ್ಲೂ ತೇವವಾಗಿರುತ್ತದೆ. ಇಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚು. ಕಚ್‌ನಲ್ಲಿ 6 ಪುರಸಭೆಗಳು, 10 ತಾಲೂಕುಗಳು ಮತ್ತು 939 ಗ್ರಾಮಗಳಿವೆ. ಇಲ್ಲಿನ ಉಪ್ಪಿನ ಸರೋವರದ ಮೇಲೆ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಕಚ್ ಜಿಲ್ಲೆ ಎಷ್ಟು ದೊಡ್ಡದಾಗಿದೆ ಎಂದರೆ ಇಸ್ರೇಲ್, ಕುವೈತ್ ಸೇರಿ ಎರಡೂ ದೇಶಗಳು ಸೇರಿದರೂ ಅವುಗಳಿಗಿಂತಲೂ ಹೆಚ್ಚು ವಿಸ್ತಾರವನ್ನು ಹೊಂದಿದೆ. ಇಸ್ರೇಲ್‌ನ ವಿಸ್ತೀರ್ಣ 20,770 ಕಿಮೀ ಮತ್ತು ಕುವೈತ್‌ನ ವಿಸ್ತೀರ್ಣ 17, 818 ಕಿಮೀ. ಇವೆರಡನ್ನು ಸೇರಿಸಿದರೂ ಕಚ್ ಜಿಲ್ಲೆಯ ವಿಸ್ತೀರ್ಣ ಅಧಿಕವಾಗಿದೆ. ಭಾರತದ ಅತಿಚಿಕ್ಕ ಜಿಲ್ಲೆ ಯಾವುದು ಗೊತ್ತಾ? ಪುದುಚೇರಿಯ ಮಾಹೆ ಜಿಲ್ಲೆ ಅತಿ ಚಿಕ್ಕದು. ಇದರ ವಿಸ್ತೀರ್ಣ ಕೇವಲ 9 ಚದರ ಕಿಲೋಮೀಟರ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...