ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ಲಿಫ್ಟಿನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗಲೇ ಅದು ಸ್ಪೋಟಗೊಂಡಿದೆ. ಇದರ ಪರಿಣಾಮ ಆತ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಈ ದೃಶ್ಯಾವಳಿ ಲಿಫ್ಟ್ ನಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬುದು ಬೆಳಕಿಗೆ ಬಂದಿಲ್ಲ. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲೂ ಸಹ ಲಿಥಿಯಂ ಬ್ಯಾಟರಿ ಬಳಕೆ ಮಾಡುವ ಪರಿಣಾಮ ಅದರ ಸುರಕ್ಷತೆ ಕುರಿತು ಈಗ ಆತಂಕ ಹುಟ್ಟು ಹಾಕಿದೆ. ಅಲ್ಲದೆ ಇಂತಹ ಬ್ಯಾಟರಿಗಳನ್ನು ತೆಗೆದುಕೊಂಡು ಹೋಗುವಾಗ ಆದಷ್ಟು ಜಾಗರೂಕತೆಯಿಂದ ಇರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಯುವಕನೊಬ್ಬ ತನ್ನ ಕೈಯಲ್ಲಿ ಲಿಥಿಯಂ ಬ್ಯಾಟರಿ ಹಿಡಿದು ಲಿಫ್ಟ್ ಒಳಗೆ ಪ್ರವೇಶಿಸುತ್ತಾನೆ. ಬಳಿಕ ಲಿಫ್ಟ್ ಕ್ಲೋಸ್ ಮಾಡಲು ಆತ ಬಟನ್ ಒತ್ತುತ್ತಿದ್ದಂತೆ ಬ್ಯಾಟರಿ ಸ್ಫೋಟಗೊಂಡಿದೆ. ಗಾಳಿ ಸಂಚಾರ ಬಂದ್ ಆದಕಾರಣ ಒತ್ತಡದ ಪರಿಣಾಮ ಈ ಸ್ಫೋಟ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಸ್ಫೋಟದ ದೃಶ್ಯಾವಳಿ ಮಾತ್ರ ಎಲ್ಲರನ್ನು ಬೆಚ್ಚಿಬೀಳಿಸಿದೆ.