Watch Video | ಕಾಲಿಡಲೂ ಜಾಗವಿಲ್ಲ…….. ಚೀನಾ ‘ಮಹಾಗೋಡೆ’ ಯಲ್ಲಿ ಜನಜಂಗುಳಿ…..!

ಜನಸಂದಣಿಯಿಂದ ತುಂಬಿರುವ ಚೀನಾದ ಮಹಾಗೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚೀನಾದ ಈ ಮಹಾಗೋಡೆ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ 21 ಅಡಿ ಅಗಲದ ಗೋಡೆಯ ಮೇಲೆ ಕಾಲಿಡಲೂ ಜಾಗವಿಲ್ಲ. ಈ ಫೋಟೋ 16 ನೇ ಶತಮಾನದ ಪ್ರಾಚೀನ ಗೋಡೆಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚೀನಾದ ಮಹಾಗೋಡೆಯನ್ನು ನಿರ್ಮಿಸುವಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಡೀ ಗೋಡೆಯು ಕೈಯಿಂದ ಮಾಡಲ್ಪಟ್ಟಿದೆ. ವರದಿಯ ಪ್ರಕಾರ, ಚಕ್ರವರ್ತಿಯ ಸೈನಿಕರು ಸಾಮಾನ್ಯ ಜನರನ್ನು ಸುತ್ತುವರೆದು ಗೋಡೆಯ ಮೇಲೆ ಕೆಲಸ ಮಾಡುತ್ತಿದ್ದರು. ಸಾವಿರಾರು ಜನರು ಹಗಲು ರಾತ್ರಿ ಗೋಡೆ ಕಟ್ಟುವುದರಲ್ಲಿ ನಿರತರಾಗಿದ್ದರು. ಯಾವುದೇ ಕಾರ್ಮಿಕರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅಥವಾ ದೂರು ನೀಡಿದರೆ, ಅವರನ್ನು ಅಲ್ಲಿಯೇ ಜೀವಂತ ಸಮಾಧಿ ಮಾಡಲಾಯಿತು. ಪುರಾತತ್ತ್ವಜ್ಞರು ಗೋಡೆಯ ಕೆಲವು ಭಾಗಗಳ ಅಡಿಯಲ್ಲಿ ಮಾನವ ಅವಶೇಷಗಳನ್ನು ಸಹ ಕಂಡುಕೊಂಡಿದ್ದಾರೆ. ಹಾಗಾಗಿ ಇದಕ್ಕೆ ವಿಶ್ವದ ಅತಿ ಉದ್ದದ ಸ್ಮಶಾನ ಎಂದು ಕರೆಯಲಾಗುತ್ತದೆ. ಒಂದು ಅಂಕಿ ಅಂಶದ ಪ್ರಕಾರ, ಸುಮಾರು 2 ಸಾವಿರ ವರ್ಷಗಳ ನಿರ್ಮಾಣದ ಸಮಯದಲ್ಲಿ 4,00,000 ರಿಂದ 10,00,000 ಜನರು ಸತ್ತಿದ್ದಾರೆ. ಈ ಜನರನ್ನು ಗೋಡೆಯ ಬದಿಯಲ್ಲಿ ಅಥವಾ ಗೋಡೆಯೊಳಗೆ ಸಮಾಧಿ ಮಾಡಲಾಗಿದೆ.

ಚೀನಾದ ಮಹಾಗೋಡೆಯನ್ನು ಚೀನಾದ ಮೊದಲ ಚಕ್ರವರ್ತಿ ಕ್ವಿನ್ ಶಿ ಹುವಾಂಗ್ ಕ್ರಿ.ಪೂ. 3ನೇ ಶತಮಾನದಲ್ಲಿ ಶುರು ಮಾಡಿದ್ರು. ಆದರೆ ಅದು ಪೂರ್ಣಗೊಳ್ಳಲು ನೂರಾರು ವರ್ಷಗಳು ಬೇಕಾದವು. ವಿವಿಧ ರಾಜರು ಭದ್ರತಾ ಕಾರಣಗಳಿಗಾಗಿ ಆಯಾ ಕಾಲದಲ್ಲಿ ಗೋಡೆಯನ್ನು ವಿಸ್ತರಿಸಿದರು. 16 ನೇ ಶತಮಾನದ ವೇಳೆಗೆ, ಈ ಗೋಡೆಯು ಸುಮಾರು 21 ಕಿಲೋಮೀಟರ್‌ ವಿಸ್ತಾರಗೊಂಡಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read