ಪ್ಯಾರಿಸ್ : ಒಲಿಂಪಿಕ್ಸ್ ಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ಯಾರಿಸ್ ನಲ್ಲಿ ಶಾಕಿಂಗ್ ಘಟನೆ ವರದಿಯಾಗಿದೆ. ಆಸ್ಟ್ರೇಲಿಯಾದ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 20 ರ ಮಧ್ಯರಾತ್ರಿಯ ನಂತರ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ.
ಘಟನೆಯ ನಂತರ ರಾಜಧಾನಿಯ ಪಿಗಲ್ಲೆ ಪ್ರದೇಶದ ಕಬಾಬ್ ಅಂಗಡಿಯಲ್ಲಿ ಮಹಿಳೆ ಆಶ್ರಯ ಪಡೆದಿದ್ದರು ಎಂದು ಮೂಲಗಳು ತಿಳಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
https://twitter.com/7NewsAdelaide/status/1815675973041578448?ref_src=twsrc%5Etfw%7Ctwcamp%5Etweetembed%7Ctwterm%5E1815675973041578448%7Ctwgr%5Ecfa99204dca90233dc94a8e3e96b1d254df6c5d1%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Ffrance-australian-woman-gangraped-paris-olympics-police-2570992-2024-07-24