GOOD NEWS: ಮೊಬೈಲ್, ಚಾರ್ಜರ್ ಗಳ ಮೇಲಿನ ತೆರಿಗೆ ಇಳಿಕೆ

ನವದೆಹಲಿ: ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮೊಬೈಲ್ ಹಾಗೂ ಚಾರ್ಜರ್ ಮೇಲಿನ ತೆರಿಗೆಯನ್ನು ಇಳಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಲೋಕಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೊಬೈಲ್, ಚಾರ್ಜರ್ ಮೇಲಿನ ತೆರಿಗೆ ಇಳಿಸಲಾಗುವುದು ಎಂದರು. ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ತೆರಿಗೆ, ಸೋಲಾರ್ ಪ್ಯಾನಲ್ ಇಳಿಕೆಯಾಗಲಿದೆ ಎಂದು ತಿಳಿಸಿದರು.

ಈ ಮೂಲಕ ಮೊಬೈಲ್ ಫೋನ್, ಚಾರ್ಜರ್, ಸೋಲಾರ್ ಪ್ಯಾನಲ್ ಗಳ ಬೆಲೆ ಇಳಿಕೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read