BREAKING: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ‘ಮಾಸ್ಟರ್ ಮೈಂಡ್’, ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

ನವದೆಹಲಿ: ನೀಟ್ -ಯುಜಿ ಪರೀಕ್ಷೆಯಲ್ಲಿ ಆಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಶಶಿಕಾಂತ್ ಪಾಸ್ವಾನ್ ನನ್ನು ಸಿಬಿಐ ಬಂಧಿಸಿದೆ.

ನೀಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಶನಿವಾರ ‘ಮಾಸ್ಟರ್ ಮೈಂಡ್’ ಮತ್ತು ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೇಪರ್ ಸೋರಿಕೆಯ ಮಾಸ್ಟರ್ ಮೈಂಡ್ ಶಶಿಕಾಂತ್ ಪಾಸ್ವಾನ್, ಅಲಿಯಾಸ್ ಶಶಿ ಅಲಿಯಾಸ್ ಪಸು ಎಂದು ಗುರುತಿಸಲಾಗಿದ್ದು, ಜೆಮ್‌ಶೆಡ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಐಟಿ) ಯಿಂದ ಬಿ.ಟೆಕ್ ಪದವೀಧರನಾಗಿರುವ ಈತ ಈ ಹಿಂದೆ ಬಂಧಿತರಾಗಿದ್ದ ಕುಮಾರ್ ಮತ್ತು ರಾಕಿ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಕುಮಾರ್ ಮಂಗಲಂ ರಾಜಸ್ಥಾನದ ಭರತ್‌ಪುರದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ಇತರ ಆರೋಪಿ ದೀಪೇಂದ್ರ ಶರ್ಮಾ ಕೂಡ ಭರತ್‌ಪುರದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ.

ನೀಟ್-ಯುಜಿ ಪರೀಕ್ಷೆಯ ದಿನಾಂಕವಾದ ಮೇ 5 ರಂದು ಕುಮಾರ್ ಮಂಗಲಂ ಬಿಷ್ಣೋಯ್ ಮತ್ತು ದೀಪೇಂದರ್ ಶರ್ಮಾ ಇಬ್ಬರೂ ಹಜಾರಿಬಾಗ್‌ಗೆ ಹಾಜರಾಗಿದ್ದರು ಮತ್ತು ಈ ಹಿಂದೆ ಬಂಧಿತರಾಗಿದ್ದ ಇಂಜಿನಿಯರ್ ಪಂಕಜ್ ಕುಮಾರ್ ಅವರು ಕದ್ದ ಪೇಪರ್‌ಗೆ ‘ಸಾಲ್ವರ್ಸ್’ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. .

ಈ ಮೂವರ ಬಂಧನದೊಂದಿಗೆ NEET-UG ಅಕ್ರಮಗಳಿಗೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read