ಜುಲೈ 19ಕ್ಕೆ ಬಿಡುಗಡೆಯಾಗಲಿದೆ ‘ಕೃಷ್ಣಂ ಪ್ರಣಯಸಖಿ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು 17-07-2024 7:03PM IST / No Comments / Posted In: Featured News, Live News, Entertainment ಶ್ರೀನಿವಾಸ್ ರಾಜು ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯಸಖಿ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು ಇದೆ ಶುಕ್ರವಾರ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇರುವ ‘ದ್ವಾಪರ’ ಎಂಬ ಈ ಹಾಡನ್ನು ತುಮಕೂರಿನ ವಿದ್ಯಾ ವಾಹಿನಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಾಳವಿಕಾ ನಾಯರ್ ಪ್ರಮುಖ ಪಾತ್ರದಲ್ಲಿದ್ದಾರೆ. ಕೆ ಪ್ರಕಾಶ್ ಸಂಕಲನ, ಎವಿ ಶಿವ ಸಾಯಿ, ವಿಜಯ್ ಈಶ್ವರ್ ಅವರ ಸಂಭಾಷಣೆ, ರಾಜು ಸುಂದರಂ ನೃತ್ಯ ನಿರ್ದೇಶನ, ಹಾಗೂ ವೆಂಕಟೇಶ್ ರಾಂಪ್ರಸಾದ್ ಛಾಯಾಗ್ರಹಣವಿದೆ. ಮುಂದಿನ ತಿಂಗಳು ಆಗಸ್ಟ್ 15 ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.