ಸೌದಿ ಅರೇಬಿಯಾದಲ್ಲಿ ಪಾದರಕ್ಷೆಗಳ ಅಂಗಡಿಯೊಂದರ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣ, ನಾವು ನಿತ್ಯ ಬಾತ್ ರೂಮ್ ಗೆ ಬಳಸುವ ಹವಾಯಿ ಚಪ್ಪಲ್ ಬೆಲೆ. ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಹವಾಯಿ ಚಪ್ಪಲಿಯನ್ನು ಈ ಅಂಗಡಿಯಲ್ಲಿ ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.
ಈ ಅಂಗಡಿಯಲ್ಲಿ ಹವಾಯಿ ಚಪ್ಪಲಿಯನ್ನು ಡಿಸ್ ಪ್ಲೇ ಇಡಲಾಗಿದೆ. ಅಲ್ಲಿ 1 ಲಕ್ಷಕ್ಕೂ ಹೆಚ್ಚು ಬೆಲೆಗೆ ಈ ಚಪ್ಪಲಿ ಮಾರಾಟ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ವಿಡಿಯೋ ವೈರಲ್ ಆಗಿದೆ. ಇದ್ರ ಬೆಲೆ 4,500 ರಿಯಾಲ್ ಎಂದು ವರದಿಯಾಗಿದೆ.
ರಿಷಿ ಬಗ್ರಿ ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ನಾವು ಭಾರತೀಯರು ಈ ಸ್ಯಾಂಡಲ್‌ಗಳನ್ನು ಶೌಚಾಲಯದ ಪಾದರಕ್ಷೆಗಳಾಗಿ ಬಳಸುತ್ತೇವೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 100 ರೂಪಾಯಿಗೆ ಸಿಗುವ ಈ ಚಪ್ಪಲಿಯನ್ನು ಅಲ್ಲಿ ಅಷ್ಟೊಂದು ಬೆಲೆಗೆ ಮಾರಾಟ ಮಾಡಲಾಗ್ತಿದೆಯಾ ಎಂದು ಜನರು ಪ್ರಶ್ನೆ ಮಾಡಿದ್ದಾರೆ.