alex Certify ವೆಂಕಟೇಶ್ವರನ ಈ ವಿಗ್ರಹದ ಬೆಲೆ 3 ಲಕ್ಷ ರೂಪಾಯಿ…! ಇದ್ರ ವಿಶೇಷತೆ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಂಕಟೇಶ್ವರನ ಈ ವಿಗ್ರಹದ ಬೆಲೆ 3 ಲಕ್ಷ ರೂಪಾಯಿ…! ಇದ್ರ ವಿಶೇಷತೆ ಏನು ಗೊತ್ತಾ…?

ನಮ್ಮ ದೇಶದಲ್ಲಿ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಸಾಧಾರಣ ಪ್ರತಿಭೆಯುಳ್ಳ ಜನರಿದ್ದಾರೆ. ಕೆಲವೊಂದು ಅಪರೂಪದ ಕಲೆಗಳು  ನಿಧಾನವಾಗಿ ಮರೆಯಾಗುತ್ತಿವೆ. ಅದ್ರಲ್ಲಿ ಶಿಲ್ಪಕಲೆ ಕೂಡ ಸೇರಿದೆ. ಮಶಿನ್‌ ಬಳಸಿ ಜನರು ಮರ, ಕಲ್ಲಿನ ಕೆತ್ತನೆ ಮಾಡ್ತಿದ್ದಾರೆ. ಕೈನಲ್ಲಿ ಸುಂದರ ಕಲಾಕೃತಿಗಳನ್ನು ಅರಳಿಸುವ ಜನರ ಸಂಖ್ಯೆ ಈಗ ಕಡಿಮೆ ಆಗಿದೆ. ಆದ್ರೆ ಆಂಧ್ರಪ್ರದೇಶ ವಿಶಾಖಪಟ್ಟಣಂನ ದ್ವಾರಕಾ ಬಜಾರ್‌ನಲ್ಲಿರುವ ಫಂಕ್ಷನ್ ಹಾಲ್‌ನಲ್ಲಿ ಮಾರಾಟವಾಗ್ತಿರುವ ವಿಗ್ರಹಗಳು ಇದಕ್ಕೆ ವಿರುದ್ಧವಾಗಿವೆ. ಇಲ್ಲಿ ಕೈನಲ್ಲಿ ಮಾಡಿದ ವಿಗ್ರಹಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಇಲ್ಲಿನ ವೆಂಕಟೇಶ್ವರ ವಿಗ್ರಹ ಬಹಳ ವಿಶೇಷತೆಯನ್ನು ಹೊಂದಿದೆ. ಸಣ್ಣ ಕೆತ್ತನೆಗಳು ವಿಗ್ರಹದ ಮೆರಗನ್ನು ಹೆಚ್ಚಿಸಿದೆ. ಈ ವಿಗ್ರಹದ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿ. ಪಾಲ್‌ ಹೆಸರಿನ ವ್ಯಕ್ತಿ ಈ ವಿಗ್ರಹಗಳನ್ನು ಮಾರಾಟ ಮಾಡ್ತಿದ್ದಾರೆ. ಅವರ ಬಳಿ ಸಾವಿರದಿಂದ 3 ಲಕ್ಷ ಬೆಲೆಯ ಅನೇಕ ವಿಗ್ರಹಗಳಿವೆ.

ಈಗಿನ ದಿನಗಳಲ್ಲಿ ಯಂತ್ರದ ಬಳಕೆ ಹೆಚ್ಚಾಗಿರುವ ಕಾರಣ ಕೈ ಕೆಲಸಗಾರರ ಸಂಖ್ಯೆ ಕಡಿಮೆ ಆಗಿದೆ. ಅದನ್ನು ಉಳಿಸಲು ನಾವು ನಿರಂತರ ಕೆಲಸ ಮಾಡುತ್ತಿದ್ದೇವೆ ಎಂದು ಪಾಲ್‌ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...