ಇದೇ ಜುಲೈ 19ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ‘ಕಡಲೂರ ಕಣ್ಮಣಿ’ ಚಿತ್ರದ ‘ನಿನ್ನ ಕಂಗಳ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಹೇಮಂತ್ ಕುಮಾರ್ ಹಾಗೂ ಮಾನಸ ಹೊಳ್ಳ ಈ ಹಾಡಿಗೆ ಧ್ವನಿಯಾಗಿದ್ದು, ರಾಮ್ ಪ್ರಸನ್ನ ಹುಣಸೂರ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿನೋದ್ ರಾಮ ಹೊಳೆನರಸೀಪುರ ಸಾಹಿತ್ಯ ಬರೆದಿದ್ದಾರೆ.
ರಾಮ್ ಪ್ರಸಾದ್ ಹುಣಸೂರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ಸೇರಿದಂತೆ ನಿಶಾ, ಶಿವ ಗಿರೀಶ್, ಹರೀಶ್ ನಾಯಕ್, ಮತ್ತು ವೈಭವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ರಾಮ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗ್ಯಾಚಿ ನಿರ್ಮಾಣ ಮಾಡಿದ್ದಾರೆ. ನಿಶಿತ್ ಪೂಜಾರಿ ಸಂಕಲನ, ಮನೋಹರ್ ಹಾಗೂ ರವಿರಾಮ್ ಅವರ ಛಾಯಾಗ್ರಹಣವಿದೆ.