alex Certify ಎಸ್ಎಸ್ಎಲ್ಸಿ ಪರೀಕ್ಷೆ -3 ನೋಂದಣಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್ಎಸ್ಎಲ್ಸಿ ಪರೀಕ್ಷೆ -3 ನೋಂದಣಿಗೆ ಸೂಚನೆ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ -2ರಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ಕ್ಕೆ ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಂಡಳಿಯ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಪ್ರಸ್ತುತ ಪರೀಕ್ಷೆ- 3 ಗೆ ವಿದ್ಯಾರ್ಥಿಗಳ ನೋಂದಣಿ ಮಂದಗತಿಯಲ್ಲಿ ಸಾಗಿದ್ದು, ಪರೀಕ್ಷೆ -2ರಲ್ಲಿ ಅನುತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ -3ಕ್ಕೆ ನೋಂದಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಅಗತ್ಯ ಸೂಚನೆ ನೀಡಬೇಕು. ಈಗಾಗಲೇ ಪರೀಕ್ಷೆ -3ಕ್ಕೆ ನೋಂದಾಯಿಸಲು ಅರ್ಹರಿರುವ ಅಭ್ಯರ್ಥಿಗಳ ಶಾಲಾವಾರು ಮಾಹಿತಿ ಲಭ್ಯವಿದ್ದು, ಮಕ್ಕಳ ನೋಂದಣಿಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಒಂದು ವೇಳೆ ಪರೀಕ್ಷೆ -3ಕ್ಕೆ ನೋಂದಣಿ ಕಡಿಮೆಯಾದಲ್ಲಿ ಜಿಲ್ಲಾ ಉಪ ನಿರ್ದೇಶಕರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ -3 ಆಗಸ್ಟ್ 2ರಿಂದ 9ರವರೆಗೆ ನಡೆಯಲಿದ್ದು, ಜುಲೈ 17ಕ್ಕೆ ಪರೀಕ್ಷೆ ನೋಂದಣಿಗೆ ಕೊನೆಯ ದಿನವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...