HomeKarnatakaWATCH VIDEO : ರಾಜ್ಯದ ಶಾಲಾ ಮಕ್ಕಳಿಗೆ ಹೊಸ ‘ಯೋಜನೆ’ ಘೋಷಿಸಿದ ಸರ್ಕಾರ, ಇಲ್ಲಿದೆ ಸಂಪೂರ್ಣ...

WATCH VIDEO : ರಾಜ್ಯದ ಶಾಲಾ ಮಕ್ಕಳಿಗೆ ಹೊಸ ‘ಯೋಜನೆ’ ಘೋಷಿಸಿದ ಸರ್ಕಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಹೊಸ ‘ಯೋಜನೆ’ ಘೋಷಿಸಿದ್ದು, ಯೋಜನೆಯ ಬಗ್ಗೆ ಸರ್ಕಾರದ ವಿಡಿಯೋದ ಮೂಲಕ ಸಂಪೂರ್ಣ ಮಾಹಿತಿ ನೀಡಿದೆ.

ಶಾಲಾ ಮಕ್ಕಳಿಗಾಗಿ ವಿಶಿಷ್ಟ ಯೋಜನೆ ಪರಿಚಯಿಸಿದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವ್ಯವಸ್ಥೆ ಮತ್ತು ಸಹಬಾಳ್ವೆಯ ನೈತಿಕ ಶಿಕ್ಷಣ ನೀಡುವ ಆಶಯದಿಂದ ರಾಜ್ಯ ಸರ್ಕಾರ ‘ನಾವು ಮನುಜರು’ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಏನಿದು ಯೋಜನೆ..? ಏನಿದರ ಉದ್ದೇಶ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಾವು ಮನುಜರು ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರದಲ್ಲಿ 2 ಗಂಟೆಗಳ ವಿಚಾರ ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸಬೇಕು.

ಶಾಲಾ ವೇಳಾಪಟ್ಟಿಯಲ್ಲಿ ಮೌಲ್ಯಶಿಕ್ಷಣದ ಒಂದು ಅವಧಿ ಮತ್ತು ಉಳಿದ 2 ಅವಧಿಗಳನ್ನು ಹೊಂದಾಣಿಕೆ ಮಾಡಿಕೊಂಡು ಕಡ್ಡಾಯವಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಉದ್ದೇಶವೇನು?

• ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆ ಬೆಳೆಸುವುದು
• ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸುವುದು
• ಸ್ಥಳೀಯ ಮೌಡ್ಯಗಳನ್ನು ನಿವಾರಣೆ ಮಾಡುವ ಬಗ್ಗೆ ಚರ್ಚಿಸುವುದು
• ಮನೆಮದ್ದು, ಸ್ಥಳೀಯ ಔಷಧಗಳ ಬಗ್ಗೆ ಪರಿಚಯಿಸುವುದು
• ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular