HomeAutoಬಗೆದಷ್ಟೂ ಹೊರ ಬರುತ್ತಿದೆ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಎಡವಟ್ಟು....!

ಬಗೆದಷ್ಟೂ ಹೊರ ಬರುತ್ತಿದೆ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಎಡವಟ್ಟು….!

ಮಹಾರಾಷ್ಟ್ರದ ಪುಣೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿರುವ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಪೂಜಾ ಖೇಡ್ಕರ್‌ ಬಳಸುತ್ತಿದ್ದ ಆಡಿ ಕಾರು, ಅನೇಕ ಬಾರಿ ವಾಹನ ಸಂಚಾರ ನಿಯಮವನ್ನು ಉಲ್ಲಂಘಿಸಿದೆ. ಅವರ ಕಾರಿನ ನಂಬರ್‌ ಮೇಲೆ 21 ನಿಯಮ ಉಲ್ಲಂಘನೆ ಚಲನ್‌ ಇದೆ. ಆದ್ರೆ ಇದ್ರಲ್ಲಿ ಒಂದೇ ಒಂದು ಚಲನ್‌ ಹಣವನ್ನು ಪೂಜಾ ಖೇಡ್ಕರ್‌ ಪಾವತಿ ಮಾಡಿಲ್ಲ.

ಪೂಜಾ ಖೇಡ್ಕರ್‌ ತಮ್ಮ ಖಾಸಗಿ ಕಾರಿನ ಮೇಲೂ ಮಹಾರಾಷ್ಟ್ರ ಸರ್ಕಾರದ ಲೋಗೋ ಇದೆ. ಕೆಂಪು-ನೀಲಿ ಲೈಟ್‌ ಬಳಸಿದ್ದಾರೆ. ಅನೇಕ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿರುವ ಈ ಆಡಿ ಕಾರಿನ ಮೇಲೆ 26 ಸಾವಿರ ರೂಪಾಯಿ ದಂಡವಿದೆ. ಪುಣೆಯ ಹೆಚ್ಚುವರಿ ಪೊಲೀಸ್ ಕಮಿಷನರ್ ಮನೋಜ್ ಪಾಟೀಲ್ ಈ  ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಟ್ರೈನಿ ಐಎಎಸ್‌ ಪೂಜಾ ಖೇಡ್ಕರ್‌ ತಮ್ಮ ಧಿಮಾಕಿನಿಂದ ಸದ್ಯ ಸುದ್ದಿಯಲ್ಲಿದ್ದಾರೆ. ಟ್ರೈನಿ ಐಎಎಸ್‌ ಅಧಿಕಾರಿಗೆ ಸಿಗದ ಸೌಲಭ್ಯಕ್ಕೆ ಪೂಜಾ ಬೇಡಿಕೆ ಇಟ್ಟಿದ್ದಾರೆ. ಓವರ್‌ ಸ್ಪೀಡ್‌, ಸಿಗ್ನಲ್‌ ನಿಯಮ ಪಾಲಿಸದೆ ಇರೋದು, ಪೊಲೀಸರು ವಾಹನ ತಡೆದ್ರೂ ನಿಲ್ಲಿಸದೆ ಮುಂದೆ ಹೋದ ಅನೇಕ ದೂರು ಪೂಜಾ ಮೇಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular