HomeEntertainmentರಿಲೀಸ್ ಆಯ್ತು ರಾಜ ವರ್ಧನ್ ನಟನೆಯ 'ಹಿರಣ್ಯ' ಚಿತ್ರದ ಟ್ರೈಲರ್

ರಿಲೀಸ್ ಆಯ್ತು ರಾಜ ವರ್ಧನ್ ನಟನೆಯ ‘ಹಿರಣ್ಯ’ ಚಿತ್ರದ ಟ್ರೈಲರ್

ರಾಜವರ್ಧನ್ ಅಭಿನಯದ ಪ್ರವೀಣ್ ಅಯುಕ್ತ್ ನಿರ್ದೇಶನದ ‘ಹಿರಣ್ಯ’ ಚಿತ್ರದ ಟ್ರೈಲರ್ ಎಂಆರ್‌ಟಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ರಾಜ ವರ್ಧನ್ ಸೇರಿದಂತೆ ರಿಹಾನ, ದಿವ್ಯಾ ಸುರೇಶ್, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ, ಗಿರೀಶ್ ಬಣ್ಣ ಹಚ್ಚಿದ್ದು, ವೇದಾಸ್ ಇನ್ಫಿನಿಟ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ವಿಘ್ನೇಶ್ವರ ಗೌಡ ಹಾಗೂ  ವಿಜಯ ಗೌಡ ಬಿದರಹಳ್ಳಿ ನಿರ್ಮಾಣ ಮಾಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ,  ಯೋಗೇಶ್ವರನ್ ಆರ್  ಛಾಯಾಗ್ರಹಣ, ವಿನೋದ್ ಮತ್ತು ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ,   ಮದನ್ ಹರಿಣಿ ಮತ್ತು ಮುರಳಿ ನೃತ್ಯ ನಿರ್ದೇಶನವಿದೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular