ಹದಗೆಟ್ಟಿದೆ ಗಂಭೀರ್-ಕೊಹ್ಲಿ ನಡುವಣ ಸಂಬಂಧ; ಟೀಂ ಇಂಡಿಯಾಕ್ಕೆ ಸಮಸ್ಯೆಯಾಗಲಿದೆಯೇ ಹೊಸ ಹೆಡ್‌ ಕೋಚ್‌ ಆಯ್ಕೆ…..?

 

ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌ಗೆ ಶ್ರೀಲಂಕಾ ಪ್ರವಾಸ ಮೊದಲ ಸವಾಲು. ಆದರೆ ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರು ತಂಡದಲ್ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ. ಗಂಭೀರ್ ಈಗ ಕೋಚ್ ಆಗಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ಆದರೆ ಈ ನೇಮಕಾತಿಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಬಿಸಿಸಿಐಗೂ ತೊಂದರೆಯಾಗಬಹುದು ಎಂಬ ಭಯವಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಉದ್ವಿಗ್ನ ಸಂಬಂಧವೇ ಇದಕ್ಕೆ ಕಾರಣ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸಂಬಂಧವು ಸ್ನೇಹಪರವಾಗಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಐಪಿಎಲ್‌ನಲ್ಲಿ ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಗಂಭೀರ್ ಅವರ ಕೋಚಿಂಗ್‌ಗೆ  ವಿರಾಟ್ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ಆತಂಕ. ಸಾಮಾಜಿಕ ಜಾಲತಾಣಗಳಲ್ಲೂ ಈ ಕಾಂಬಿನೇಷನ್ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕೋಚ್ ಆಗುವ ಮುನ್ನ ಗೌತಮ್ ಗಂಭೀರ್ ಹಲವು ಬಾರಿ ಲೈವ್ ಪಂದ್ಯಗಳು ಮತ್ತು ಶೋಗಳಲ್ಲಿ ತಂಡದಲ್ಲಿನ ಸ್ಟಾರ್ ಸಂಸ್ಕೃತಿಯನ್ನು ತೊಡೆದುಹಾಕುವ ಬಗ್ಗೆ ಮಾತನಾಡಿದ್ದರು. ಉತ್ತಮ ಪ್ರದರ್ಶನ ನೀಡುವವರು ಮಾತ್ರ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಹೇಳಿದ್ದರು. ಆದ್ದರಿಂದ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ಖಚಿತ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ತಂಡಕ್ಕಾಗಿ ಆಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ತಮ್ಮ ಸಂತೋಷ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಆದರೆ ಗಂಭೀರ್ ಮುಖ್ಯ ಕೋಚ್ ಆಗಿ ಭಾರತೀಯ ಡ್ರೆಸ್ಸಿಂಗ್ ರೂಮ್‌ಗೆ  ಪ್ರವೇಶಿಸಿದಾಗ ಪರಿಸ್ಥಿತಿ ಹೇಗಿರಬಹುದು ಎಂಬುದು ಪ್ರಶ್ನೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಅವರ ಸಂಬಂಧವು ಹದಗೆಟ್ಟಿದೆ.

ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ ಟೀಂ ಇಂಡಿಯಾದಲ್ಲಿ ವಿರಾಟ್‌ ಕೊಹ್ಲಿ ಆಡುತ್ತಿಲ್ಲ. ಹಾಗಾಗಿ ಕೊಹ್ಲಿ ಮತ್ತು ಗಂಭೀರ್‌ ಅವರ ಸಮನ್ವಯವನ್ನು ನೋಡಲು ಅಭಿಮಾನಿಗಳು ಸುಮಾರು ಎರಡು ತಿಂಗಳು ಕಾಯಬೇಕಾಗಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read