HomeKarnatakaಚುನಾವಣೆ ಬಳಿಕ ಕೇಂದ್ರದಿಂದ ‘ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಬಂದ್ ; ಸಿಎಂ ಸಿದ್ದರಾಮಯ್ಯ...

ಚುನಾವಣೆ ಬಳಿಕ ಕೇಂದ್ರದಿಂದ ‘ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಬಂದ್ ; ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು : ಚುನಾವಣೆ ಬಳಿಕ ಕೇಂದ್ರ ಸರ್ಕಾರ ‘ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಬಂದ್ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಆರಂಭಿಸಿದ್ದ ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಯೋಜನೆಯನ್ನು ಚುನಾವಣೆ ಬಳಿಕ ನಿಲ್ಲಿಸಿದೆ. ಚುನಾವಣೆಗೋಸ್ಕರ ಈ ಯೋಜನೆ ಜಾರಿಗೆ ತಂದದ್ದು ಎಂದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.

ನಾವು ಅನ್ನಭಾಗ್ಯ ಯೋಜನೆಗಾಗಿ ಕೇಂದ್ರದ ಬಳಿ ಅಕ್ಕಿ ಕೇಳಿದರೆ ದಾಸ್ತಾನು ಇಲ್ಲ ಎಂದು ಹೇಳಿದರು. ಇದರಿಂದ ನಾವು ಜನರಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಬೇಕಾದ ಪರಿಸ್ಥಿತಿ ಉಂಟಾಯಿತು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಬೂ ಜಗಜೀವನ್ ರಾಮ್ ಅವರ ಕೊಡುಗೆ ಅನನ್ಯ

ಹಸಿರು ಕ್ರಾಂತಿಯ ಶಿಲ್ಪಿಯಾಗಿ, ಯುದ್ಧಕಾಲದ ಯಶಸ್ವಿ ರಕ್ಷಣಾ ಸಚಿವರಾಗಿ, ದುಡಿಯುವ ಕೈಗಳ ಹಿತರಕ್ಷಕ ಕಾರ್ಮಿಕ ಸಚಿವರಾಗಿ, ಶೋಷಿತ ವರ್ಗಗಳ ಜನರ ದನಿಯಾಗಿ, ಹೀಗೆ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸದೃಢ, ಸ್ವಾವಲಂಬಿ ಭಾರತ ನಿರ್ಮಾಣದವರೆಗೆ ಬಾಬೂ ಜಗಜೀವನ್ ರಾಮ್ ಅವರ ಕೊಡುಗೆ ಅನನ್ಯ. ದೇಶಕ್ಕಾಗಿ ಬದುಕು ಸವೆಸಿದ ಮಹಾನ್ ಚೇತನ ಬಾಬೂಜಿಯವರ ಪುಣ್ಯಸ್ಮರಣೆ ದಿನ ಅವರನ್ನು ಗೌರವದಿಂದ ಸ್ಮರಿಸಿ ನಮಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular