HomeKarnatakaಜಾಮೀನಿಗಾಗಿ ನಕಲಿ ದಾಖಲೆ ಸಲ್ಲಿಕೆ: ಆರೋಪಿಗಳ ವಿರುದ್ಧ FIR ದಾಖಲು

ಜಾಮೀನಿಗಾಗಿ ನಕಲಿ ದಾಖಲೆ ಸಲ್ಲಿಕೆ: ಆರೋಪಿಗಳ ವಿರುದ್ಧ FIR ದಾಖಲು

ಬೆಂಗಳೂರು: ಜಾಮೀನು ಪಡೆಯಲು ಆರೋಪಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಾಮೀನಿಗಾಗಿ ನಕಲಿ ದಾಖಲೆ ಸಲ್ಲಿಸಿ ಆರೋಪಿಗಳು ಕೋರ್ಟ್ ಗೆ ಮೋಸ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಮಾದಕ ವಸ್ತುಗಳು ಹಗೂ ಅಮಲು ಪದಾರ್ಥ ನಿಯಂತ್ರಣ ಕಾಯ್ದೆಯಡಿ 2021ರಲ್ಲಿ ಆದಿತ್ಯಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಆರೋಪಿಗೆ ಜಾಮೀನು ನೀಡಿತ್ತು. ಆದರೆ ಆತ ಜಾಮೀನಿಗಾಗಿ ನಕಲಿ ದಾಖಲೆ ಹಾಗೂ ಶ್ಯೂರಿಟಿಯನ್ನು ಕೋರ್ಟ್ ಗೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರ ರೈತನೋರ್ವನ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಜಮೀನು ದಾಖಲೆ ಸೃಷ್ಟಿಸಿ ನಕಲಿ ವ್ಯಕ್ತಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವಿಚಾರ ತಿಳಿದ ಚಿಕಬಳ್ಳಾಪುರದ ರೈತ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ನಕಲಿ ದಾಖಲೆ ಸೃಷ್ಟಿಸಿ, ಆರೋಪಿಗಳು ಕೋರ್ಟ್ ಗೆ ಮೋಸ ಮಾಡಿ ಜಾಮಿನು ಪಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular