alex Certify WATCH VIDEO : ಟಿ-20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದ ಖುಷಿಗೆ ಕುಣಿದು ಕುಪ್ಪಳಿಸಿದ ಕೊಹ್ಲಿ ಪಡೆ ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ಟಿ-20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದ ಖುಷಿಗೆ ಕುಣಿದು ಕುಪ್ಪಳಿಸಿದ ಕೊಹ್ಲಿ ಪಡೆ ; ವಿಡಿಯೋ ವೈರಲ್

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀ ಇಂಡಿಯಾ ಆಟಗಾರರು ಸಂಭ್ರಮಾಚರಣೆ ನಡೆಸಿದ್ದಾರೆ. ಕೇಕ್ ಕತ್ತರಿಸಿ , ಕುಪ್ಪಳಿಸಿ ಕುಣಿದು ಸಂಭ್ರಮಾಚರಣೆ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ.

ಹೌದು, ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ಇಂದು ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿ ವಿಜಯೋತ್ಸವ ಆಚರಿಸಲಾಗಿದೆ.ನಂತರ ಕೇಕ್ ಕತ್ತರಿಸಿ ಆಟಗಾರರು ಸಂಭ್ರಮಾರಣೆ ನಡೆಸಿದರು. ನಂತರ ಇಂದು ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ.

ಜೂನ್ 29 ರಂದು, ಐಸಿಸಿ ಪುರುಷರ T20 ವಿಶ್ವಕಪ್ 2024 ಫೈನಲ್ನಲ್ಲಿ ಭಾರತವು ಬಾರ್ಬಡೋಸ್ನಲ್ಲಿ ಏಡೆನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿತು.ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಇತರ ಸದಸ್ಯರು ಬಾರ್ಬಡೋಸ್ನಿಂದ ಆಗಮಿಸಿದ್ದಾರೆ. ಜೂನ್ 30 ರಿಂದ ಬೆರಿಲ್ ಚಂಡಮಾರುತದ ಕಾರಣದಿಂದಾಗಿ ಆಗಮನ ವಿಳಂಬವಾಗಿತ್ತು.ಚಂಡಮಾರುತ ದಿಂದಾಗಿ ಬಾರ್ಬಡೋಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...