alex Certify ರೈಲ್ವೇ ಪ್ರಯಾಣಿಕರ ಗಮನಕ್ಕೆ ; ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಪ್ರಯಾಣಿಕರ ಗಮನಕ್ಕೆ ; ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ..!

ಬೆಂಗಳೂರು : ಪ್ರಯಾಣಿಕರ ಗಮನಕ್ಕೆ, ರೈಲ್ವೇ ಇಲಾಖೆ ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ.

ಕೆಎಸ್ಆರ್ ಬೆಂಗಳೂರಿನಿಂದ ಡೆಮು ರೈಲು ಸಂಜೆ 6.10ಕ್ಕೆ ಹೊರಟು ಕೋಲಾರಕ್ಕೆ ರಾತ್ರಿ 9.30ಕ್ಕೆ ತಲುಪುತ್ತಿತ್ತು. ಜುಲೈ 2 ರಿಂದ ಸಂಜೆ 6.20ಕ್ಕೆ ಹೊರಡಲಿದೆ. ಕೋಲಾರಕ್ಕೆ 9.40ಕ್ಕೆ ತಲುಪಲಿದೆ.

ಮೆಮು ರೈಲು ಚಿಕ್ಕಬಳ್ಳಾಪುರದಿಂದ ಸಂಜೆ 6.45ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ತಲುಪುತ್ತಿತ್ತು. ಇನ್ನು ಮುಂದೆ 6.50ಕ್ಕೆ ಹೊರಡಲಿದೆ. ಕಂಟೋನ್ಮೆಂಟ್ಗೆ ನಿಗದಿತ ಸಮಯಕ್ಕೆ (ರಾತ್ರಿ 9) ತಲುಪಲಿದೆ.

ಮೈಸೂರು – ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆಯಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪಿಆರ್ಓ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...