ಬೆಂಗಳೂರು: ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೋಮವಾರ ನೇಮಿಸಲಾಗಿದೆ.
“ನಮ್ಮ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಎಲ್ಲಾ ರೀತಿಯಲ್ಲೂ ಸ್ವಾಗತಿಸುತ್ತೇವೆ, ದಿನೇಶ್ ಕಾರ್ತಿಕ್ ಹೊಸ ಅವತಾರದಲ್ಲಿ ಆರ್ಸಿಬಿಗೆ ಮರಳಿದ್ದಾರೆ. ಡಿಕೆ ಆರ್ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕರಾಗಲಿದ್ದಾರೆ” ಎಂದು ಈ ಹಿಂದೆ ಆರ್ಸಿಬಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿತ್ತು.
ಇದನ್ನು ರೋಮಾಂಚಕಾರಿ ಅವಕಾಶ ಎಂದು ಬಣ್ಣಿಸಿದ ಕಾರ್ತಿಕ್, “ವೃತ್ತಿಪರ ಮಟ್ಟದಲ್ಲಿ ಕೋಚಿಂಗ್ ನನಗೆ ರೋಮಾಂಚನಕಾರಿಯಾಗಿದೆ ಮತ್ತು ಇದು ನನ್ನ ಜೀವನದ ಹೊಸ ಅಧ್ಯಾಯವಾಗಿ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.