alex Certify ಮಳೆಗಾಲದಲ್ಲಿ ಕಾಡುವ ಈ ಅಪಾಯಕಾರಿ ಕಾಯಿಲೆಗಳಿಂದ ಪಾರಾಗಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಕಾಡುವ ಈ ಅಪಾಯಕಾರಿ ಕಾಯಿಲೆಗಳಿಂದ ಪಾರಾಗಲು ಇಲ್ಲಿದೆ ಟಿಪ್ಸ್‌

ತುಂತುರು ಮಳೆ, ಎಲ್ಲಿ ನೋಡಿದ್ರೂ ಹಚ್ಚ ಹಸಿರು ಜೊತೆಗೆ ತಾಜಾತನ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಮಳೆಗಾಲ ಹಲವು ರೋಗಗಳನ್ನೂ ಆಹ್ವಾನಿಸುತ್ತದೆ. ತೇವಾಂಶ ಮತ್ತು ನೀರಿನ ಕಾರಣದಿಂದಾಗಿ ಮಳೆಗಾಲದಲ್ಲಿ ಅನೇಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು  ಸಕ್ರಿಯವಾಗುತ್ತವೆ. ಇದು ಆರೋಗ್ಯವನ್ನು ಹದಗೆಡಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಯಾವ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ ಮತ್ತು ಅವುಗಳಿಂದ ಹೇಗೆ ಪಾರಾಗಬಹುದು ಎಂಬುದನ್ನು ತಿಳಿಯೋಣ.

ಕೆಮ್ಮು ಮತ್ತು ಶೀತ

ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮಿನ ಅಪಾಯ ಹೆಚ್ಚಾಗಿರುತ್ತದೆ. ಇದು ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಪದೇ ಪದೇ ಸೀನು, ಮೂಗು ಸೋರುವಿಕೆ, ಕಫ, ತಲೆನೋವಿನಂತಹ ಸಮಸ್ಯೆಗಳಾಗುತ್ತವೆ. ಇವುಗಳಿಂದ ಪಾರಾಗಲು ಶುಂಠಿ, ತುಳಸಿ, ದಾಲ್ಚಿನ್ನಿ ಮುಂತಾದ ಮಸಾಲೆಗಳನ್ನು ಬೆರೆಸಿ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಡೆಂಗ್ಯೂ

ಡೆಂಗ್ಯೂ, ಈಡಿಸ್ ಈಜಿಪ್ಟೈ ಸೊಳ್ಳೆಗಳ ಕಡಿತದಿಂದ ಹರಡುವ ರೋಗ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಈ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತದೆ. ತೀವ್ರ ಜ್ವರ, ತಲೆನೋವು, ಕಣ್ಣುಗಳಲ್ಲಿ ನೋವು, ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಇವೆಲ್ಲ ಡೆಂಗ್ಯೂ ರೋಗಲಕ್ಷಣಗಳು. ಇದನ್ನು ತಪ್ಪಿಸಲು ಮನೆಯ ಸುತ್ತಲೂ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆಗಳನ್ನು ಬಳಸಿ ಮತ್ತು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ.

ಮಲೇರಿಯಾ

ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಡಿತದಿಂದ ಮಲೇರಿಯಾ ಹರಡುತ್ತದೆ. ಈ ರೋಗವು ಮಳೆಗಾಲದಲ್ಲಿ ಹೆಚ್ಚು. ಏಕೆಂದರೆ ಈ ಸಮಯದಲ್ಲಿ ಸೊಳ್ಳೆಗಳು ವೇಗವಾಗಿ ಉತ್ಪತ್ತಿಯಾಗುತ್ತವೆ. ಮಲೇರಿಯಾದ ಲಕ್ಷಣಗಳೆಂದರೆ ಅಧಿಕ ಜ್ವರ, ಶೀತ, ಬೆವರು ಮತ್ತು ತಲೆನೋವು. ಇದರಿಂದ ಪಾರಾಗಲು ಸೊಳ್ಳೆ ಪರದೆಗಳು, ಸೊಳ್ಳೆ ನಿವಾರಕ ಕ್ರೀಮ್ಗಳು ಮತ್ತು ಸ್ಪ್ರೇಗಳನ್ನು ಬಳಸಿ.

ಟೈಫಾಯಿಡ್

ಟೈಫಾಯಿಡ್ ಒಂದು ಅಪಾಯಕಾರಿ ಕಾಯಿಲೆ. ಇದು ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದ ಸೋಂಕಿನಿಂದ ಹರಡುತ್ತದೆ. ಸೋಂಕಿತ ನೀರು ಮತ್ತು ಕಲುಷಿತ ಆಹಾರ ಇದಕ್ಕೆ ವಿಶೇಷವಾಗಿ ಕಾರಣವಾಗುತ್ತದೆ. ಈ ರೋಗದ ಲಕ್ಷಣಗಳೆಂದರೆ ಅಧಿಕ ಜ್ವರ, ಹೊಟ್ಟೆ ನೋವು, ತಲೆನೋವು ಮತ್ತು ದೌರ್ಬಲ್ಯ. ಇದರಿಂದ ದೂರವಿರಲು ಶುದ್ಧ ನೀರು ಕುಡಿಯಿರಿ. ತಿನ್ನುವ ಮೊದಲು ಕೈ ತೊಳೆಯಿರಿ. ಮಾರುಕಟ್ಟೆಯಲ್ಲಿ ಸಿಗುವ ತೆರೆದ ಆಹಾರಗಳನ್ನು ಸೇವಿಸಬಾರದು.

ವೈರಲ್ ಜ್ವರ

ವೈರಲ್ ಜ್ವರವು ಅನೇಕ ರೀತಿಯ ವೈರಸ್‌ಗಳ ಸೋಂಕಿನಿಂದ ಉಂಟಾಗುವ ಸಾಮಾನ್ಯ ಕಾಯಿಲೆ. ವಿಶೇಷವಾಗಿ ಬದಲಾಗುತ್ತಿರುವ ಹವಾಮಾನದಲ್ಲಿ ಅದರ ಅಪಾಯವು ತುಂಬಾ ಹೆಚ್ಚು. ಇದರ ಲಕ್ಷಣಗಳೆಂದರೆ ಜ್ವರ, ತಲೆನೋವು, ಗಂಟಲು ನೋವು, ಆಯಾಸ ಮತ್ತು ದೇಹದ ನೋವು. ಇದನ್ನು ತಡೆಗಟ್ಟಲು ಆರೋಗ್ಯಕರ ಆಹಾರವನ್ನು ಸೇವಿಸಿ. ಹೆಚ್ಚು ನೀರು ಕುಡಿಯಿರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...