1 ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿಯಾದ 9 ವರ್ಷದ ಬಾಲಕ; ಇದರ ಹಿಂದಿದೆ ಮನಕಲಕುವ ಕಾರಣ…! 28-06-2024 12:10PM IST / No Comments / Posted In: Latest News, India, Live News ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಲು ಹಲವರು ಪ್ರಯತ್ನಿಸುತ್ತಲೇ ಇರುತ್ತಾರೆ. ತಮ್ಮಿಚ್ಛೆಯ ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಿರುತ್ತಾರೆ. ಆದರೆ ತನ್ನ ಜೀವಮಾನದಲ್ಲಿ ಈ ಸಾಧನೆಯಾಗಲೀ, ಕೊನೇ ಪಕ್ಷ ಪ್ರಯತ್ನವೂ ಸಾಧ್ಯವಾಗುವುದಿಲ್ಲ ಎಂದು ತಿಳಿದ 9 ವರ್ಷದ ಬಾಲಕ ಕೇವಲ ಒಂದು ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿಯಾಗಿದ್ದಾನೆ. ಉತ್ತರಪ್ರದೇಶನದ ವಾರಾಣಸಿಯ 9 ವರ್ಷದ ಬಾಲಕ ರಣವೀರ್ ಭಾರ್ತಿಗೆ ತಾನು ಐಪಿಎಸ್ ಆಗಬೇಕೆಂಬ ಕನಸಿದೆ. ಆದರೆ ಆತನ ಕನಸನ್ನ ಬ್ರೇನ್ ಟ್ಯೂಮರ್ ಕಾಯಿಲೆ ಕೊಂದು ಹಾಕಿದೆ. ಹೀಗಾಗಿ ಆತನ ಕನಸನ್ನು ವಾರಣಾಸಿ ವಲಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ನನಸು ಮಾಡಿದ್ದಾರೆ. ADG ವಲಯ ವಾರಣಾಸಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಣವೀರ್ ಭಾರ್ತಿಯ ವೀಡಿಯೊವನ್ನು ಹಂಚಿಕೊಂಡಿದ್ದು, “9 ವರ್ಷದ ರಣವೀರ್ ಭಾರ್ತಿ ವಾರಣಾಸಿಯ ಮಹಾಮಾನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ ರಣವೀರ್ ಐಪಿಎಸ್ ಅಧಿಕಾರಿಯಾಗಬೇಕೆಂದು ತನ್ನ ಆಸೆಯನ್ನು ವ್ಯಕ್ತಪಡಿಸಿದನು. ಆದ್ದರಿಂದ ಮಗುವಿನ ಆಸೆಯನ್ನು ಕಚೇರಿಯಲ್ಲಿ ಪೂರೈಸಲಾಯಿತು” ಎಂದು ತಿಳಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕ ರಣವೀರ್ ಭಾರ್ತಿ ಖಾಕಿ ಸಮವಸ್ತ್ರ ಧರಿಸಿ ಕ್ಯಾಬಿನ್‌ನಲ್ಲಿ ಕುಳಿತು ಅಧಿಕಾರಿಗಳನ್ನು ಭೇಟಿಯಾಗಿ ಹಸ್ತಲಾಘವ ಮಾಡುತ್ತಿರುವುದು ಕಂಡುಬಂದಿದೆ. ಬಾಲಕನ ಆಸೆಯನ್ನು ಈಡೇರಿಸಿದ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಉತ್ತಮ ಚಿಂತನೆಯ ಉಪಕ್ರಮ ಎಂದು ಬಣ್ಣಿಸಿ ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ. 09 वर्षीय बालक रणवीर भारती के ब्रेन ट्यूमर का इलाज महामना कैंसर अस्पताल वाराणसी में चल रहा है, ऐसी अवस्था में रणवीर ने #IPS अधिकारी बनने की इच्छा व्यक्त की, तो #adgzonevaranasi @piyushmordia के कार्यालय में बच्चे की इच्छा की पूर्ति की गयी । pic.twitter.com/xxeGFT3UKe — ADG ZONE VARANASI (@adgzonevaranasi) June 26, 2024