ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ನೀರು ಸಿಡಿಸಿ ಮೋಜು ಮಾಡಲು ಮುಂದಾಗಿದ್ದವರು ತಮ್ಮ ಕುಚೇಷ್ಠೆಯಿಂದ ಶಿಕ್ಷೆ ಅನುಭವಿಸಿದ್ದಾರೆ.
ಯುವಕರ ಗುಂಪೊಂದು ರೈಲಿನ ಹಳಿಯ ಪಕ್ಕದಲ್ಲಿ ನೀರು ತುಂಬಿರುವ ಕಟ್ಟೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಬೈಕ್ನ ಇಂಜಿನ್ಗೆ ರಿವ್ವಿಂಗ್ ಮಾಡುವ ಮೂಲಕ ಹಳಿ ಮೇಲೆ ಹಾದುಹೋಗುವ ರೈಲಿಗೆ ನೀರು ಚಿಮ್ಮಿಸುತ್ತಿದ್ದರು. ತಮ್ಮ ಮೋಜಿನ ವೇಳೆ ರೈಲು ಮುಂದೆ ಸಾಗುತ್ತಾ ಹೋಗುತ್ತದೆ ಎಂದು ಅವರು ಭಾವಿಸಿದ್ದರು.
ಆದರೆ ಘಟನೆ ತಿರುವು ಪಡೆದು ಆಶ್ಚರ್ಯವೆಂಬಂತೆ ರೈಲು ಅನಿರೀಕ್ಷಿತವಾಗಿ ಸ್ಥಗಿತಗೊಂಡಿತು. ರೈಲಿನಲ್ಲಿದ್ದವರು ತಕ್ಷಣವೇ ಇಳಿದು ಬಂದು ಕುಚೇಷ್ಟೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿ, ಬೆದರಿಸಿ ಅವರನ್ನು ರೈಲಿಗೆ ಹತ್ತಿಸಿಕೊಂಡರು.
ನಂತರ ಪೊಲೀಸರು ಕ್ಷಿಪ್ರವಾಗಿ ಮಧ್ಯಪ್ರವೇಶಿಸಿ ಬೈಕ್ ಜಪ್ತಿ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಆಕ್ರೋಶಗೊಂಡ ಪ್ರಯಾಣಿಕರು ಕಿಡಿಗೇಡಿಗಳನ್ನು ಹಿಂಬಾಲಿಸುತ್ತಿದ್ದಂತೆ ಅವರು ಸ್ಥಳದಿಂದ ಓಡಿಹೋಗುತ್ತಾರೆ. ಪಾಕಿಸ್ತಾನದಲ್ಲಿ ನಡೆದಿರುವ ಈ ಘಟನೆ ತ್ವರಿತವಾಗಿ ವೈರಲ್ ಆಗಿದೆ.
ಘಟನೆಯ ಗಂಭೀರತೆಯ ಹೊರತಾಗಿಯೂ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕಿಡಿಗೇಡಿಗಳು ಅವರ ಅಜಾಗರೂಕ ವರ್ತನೆಗೆ ಏಕೆ ಹೊಣೆಗಾರರಾಗಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ.