
ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಸರದಲ್ಲಿ ಬಿಜೆಪಿಯವರು ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿದ್ದರಿಂದ ದೇವಾಲಯ ಈಗ ಸೋರುವ ಪರಿಸ್ಥಿತಿಗೆ ಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇವಾಲಯಗಳ ನಿರ್ಮಿಸಲಿ. ದೇವರ ಬಗ್ಗೆ ನಮಗೂ ಗೌರವ, ಭಕ್ತಿ ಇದೆ. ಆದರೆ, ಶ್ರೀ ರಾಮನನ್ನು ರಾಜಕಾರಣಕ್ಕೆ ತಂದು ಅವಸರ ಮಾಡಿ ದೇವಾಲಯ ಉದ್ಘಾಟಿಸಿದ್ದಕ್ಕೆ ರಾಮ ಮಂದಿರ ಸೋರುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ರಾಮ ಮಂದಿರವ ಕಟ್ಟಿರುವ ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಜಯಗಳಿಸಿದ್ದಾರೆ. ಹನುಮನ ಜನ್ಮಸ್ಥಳ ಕೊಪ್ಪಳದಲ್ಲಿ ಬಿಜೆಪಿಯವರು ಹನುಮಂತನನ್ನು ರಾಜಕೀಯಕ್ಕೆ ತಂದಿದ್ದಕ್ಕೆ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದ್ದಾರೆ.