ಬೆಂಗಳೂರು : ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಕ್ರವರ್ತಿ (60) ಎಂಬ ವೃದ್ದ ಸುಮಾರು 6 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ತಾತನ ಮೇಲೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದು, ತಾತನಿಗೆ ಸಹಕಾರ ನೀಡಿದ ಮಗುವಿನ ತಂದೆ ರಂಜಿತ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹುಳಿಮಾವು ಸಮೀಪದ ವೇಣುಗೋಪಾಲ್ ನಗರದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ಕೆಲಕ್ಕೆ ಹೋಗಿದ್ದ ವೇಳೆ 60 ವರ್ಷದ ಚಕ್ರವರ್ತಿ, 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿ ತಾಯಿಗೆ ಮನೆ ಮಗುವಿನ ಹೆಸರಿಗೆ ಬರೆಯುತ್ತೇವೆ, ಚಿನ್ನದ ಕೊಡಿಸುತ್ತೇವೆ ಎಂದು ಧಮ್ಕಿ ಹಾಕಿದ್ದರು. ಘಟನೆ ಸಂಬಂಧ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗುವಿನ ತಂದೆ ರಂಜಿತ್ ಕುಮಾರ್ನನ್ನು ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ ಆರೊಪದಡಿ ಬಂದಿಸಿದ್ದು, ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.