BREAKING : ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರು ಸೇರಿ 9 ಮಂದಿ ಸಾವು..!

ಉತ್ತರಾಖಂಡ : ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್ಗೆ ಚಾರಣಕ್ಕೆ ತೆರಳಿದ್ದ 22 ಸದಸ್ಯರ ತಂಡದ ಪೈಕಿ ಕರ್ನಾಟಕದವರು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಸ್ಥಳೀಯ ಮಾರ್ಗದರ್ಶಿಗಳನ್ನು ಒಳಗೊಂಡ ತಂಡವು ಮೇ 29 ರಂದು ಸಾಹಸವನ್ನು ಪ್ರಾರಂಭಿಸಿತು, ಜೂನ್ 7 ರೊಳಗೆ ವಾಪಸ್ ಆಗಲು ನಿರ್ಧರಿಸಿತ್ತು

ಮೃತರನ್ನು ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ ಕೆಪಿಎಸ್ (50) ವಿನಾಯಕ್ ಎಂದು ಗುರುತಿಸಲಾಗಿದೆ. ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್, ಸ್ಮೃತಿ, ಸೀನಾ ಸೇರಿ ಹಲವರನ್ನು ರಕ್ಷಣೆ ಮಾಡಲಾಗಿದೆ.

https://twitter.com/i/status/1798249580296851491

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read