ಹಿರಿಯ ವ್ಯಕ್ತಿಯೊಬ್ಬರು ಮೊಹಮ್ಮದ್ ರಫಿ ಅವರ ʼಪುಕಾರುತಾ ಚಲಾ ಹೂನ್ʼ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಉಪ ನಿರ್ದೇಶಕ ದಯಾನಂದ ಕಾಂಬ್ಳೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
85 ವರ್ಷದ ವ್ಯಕ್ತಿಯ ವೀಡಿಯೊವನ್ನು ಫೆಬ್ರವರಿ 10 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅವರು ಮೈಕ್ರೊಫೋನ್ ಹಿಡಿದುಕೊಂಡು ಮೊಹಮ್ಮದ್ ರಫಿ ಹಾಡನ್ನು ಹಾಡುವುದನ್ನು ಕಾಣಬಹುದು.
ತಮಿಳುನಾಡಿನ ಕೊಯಮತ್ತೂರಿನ ವೃದ್ಧಾಶ್ರಮದಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. “ಕೊಯಮತ್ತೂರಿನ ವೃದ್ಧಾಶ್ರಮದಿಂದ 85 ವರ್ಷದ ವ್ಯಕ್ತಿಯೊಬ್ಬರು ಹಳೆಯ ಬಾಲಿವುಡ್ ಹಾಡನ್ನು ಹಾಡುತ್ತಿದ್ದಾರೆ” ಎಂದು ದಯಾನಂದ್ ಕಾಂಬ್ಳೆ ಬರೆದಿದ್ದಾರೆ.
https://twitter.com/dayakamPR/status/1623869297737990145?ref_src=twsrc%5Etfw%7Ctwcamp%5Etweetembed%7Ctwterm%5E1623869297737990145%7Ctwgr%5E3cd0e21c893058fece4a5942fe523a82fa06f676%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2F85-year-old-man-sings-mohammed-rafis-pukarta-chala-hoon-at-old-age-home-in-coimbatore-watch-2332946-2023-02-10