SHOCKING:‌ ನಿರಂತರ ‌ʼಜಂಕ್ ಫುಡ್‌́ ಸೇವನೆ; ಕಣ್ಣು ಕಳೆದುಕೊಂಡ ಬಾಲಕ

ಮಲೇಷ್ಯಾದ ಎಂಟು ವರ್ಷದ ಬಾಲಕನೊಬ್ಬ ತನ್ನ ಆಹಾರದಲ್ಲಿ ವಿಟಮಿನ್ ಎ ಕೊರತೆಯಿಂದಾಗಿ ತನ್ನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಚಿಕನ್ ನಗೆಟ್ಸ್, ಸಾಸೇಜ್‌ಗಳು ಮತ್ತು ಕುಕೀಗಳಂತಹ ಸಂಸ್ಕರಿಸಿದ ಮತ್ತು ಜಂಕ್ ಫುಡ್‌ಗಳಿಂದ ತುಂಬಿದ ಆಹಾರ ಸೇವನೆಯಿಂದ ಈ ದುರಂತ ಸಂಭವಿಸಿದೆ. ಎಂಟು ವರ್ಷದ ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಆತನ ದೃಷ್ಟಿ ಸಮಸ್ಯೆಗಳಿಗೆ ವಿಟಮಿನ್ ಕೊರತೆಯೇ ಕಾರಣ ಎಂದು ದೃಢಪಡಿಸಿದ್ದಾರೆ.

ಬಾಲಕನ ಕಳಪೆ ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ತೀವ್ರವಾದ ವಿಟಮಿನ್ ಎ ಕೊರತೆ ಉಂಟಾಯಿತು. ವೈದ್ಯರ ಪ್ರಕಾರ, ಬಾಲಕ ಏನನ್ನೂ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಾಗ, ಆತನನ್ನು ಕೌಲಾಲಂಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ನಡೆಸಿದ ತನಿಖೆಯಲ್ಲಿ ಆಪ್ಟಿಕ್ ನರಗಳು ಹಾನಿಗೊಳಗಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕನ ಕಳಪೆ ಆಹಾರ ಪದ್ಧತಿಯಿಂದಾಗಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದನು. ಅವನು ಮಗುವಾಗಿದ್ದಾಗಿನಿಂದಲೂ ಚಿಕನ್ ನಗೆಟ್ಸ್, ಸಾಸೇಜ್‌ ಮತ್ತು ಕುಕೀಗಳಂತಹ ಸಂಸ್ಕರಿಸಿದ ಆಹಾರವನ್ನು ಮಾತ್ರ ಸೇವಿಸುತ್ತಿದ್ದನು. ಇದು ವಿಟಮಿನ್ ಎ ತೀವ್ರ ಕೊರತೆಗೆ ಕಾರಣವಾಯಿತು.

ವಿಟಮಿನ್ ಎ ಕೊಬ್ಬು ಕರಗುವ ವಿಟಮಿನ್ ಆಗಿದ್ದು, ಇದು ಅನೇಕ ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಸಾಮಾನ್ಯ ದೃಷ್ಟಿ, ರೋಗನಿರೋಧಕ ಶಕ್ತಿ, ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ಇದು ಬಹಳ ಮುಖ್ಯ. ಇದು ನಿಮ್ಮ ಹೃದಯ, ಶ್ವಾಸಕೋಶ ಮತ್ತು ಇತರ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read