Watch : ʼಶತಾಬ್ದಿ ಎಕ್ಸ್‌ಪ್ರೆಸ್‌ʼ ಎಸಿ ಕೋಚ್‌ ನಲ್ಲಿ ಹೋಳಿ ; 8 ಮಂದಿ ಸಿಬ್ಬಂದಿ ಅರೆಸ್ಟ್

ಕಾನ್ಪುರ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ ಗದ್ದಲಕ್ಕೆ ತಿರುಗಿದೆ. ನವದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ರೈಲಿನ ಎಸಿ ಚೇರ್ ಕಾರ್‌ನಲ್ಲಿ ಪ್ಯಾಂಟ್ರಿ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಹಾಗೂ ಇಬ್ಬರು ರೈಲ್ವೆ ನೌಕರರು ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡಿ, ಬಣ್ಣ ಎರಚಿ ಹೋಳಿ ಆಚರಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಪ್ಯಾಂಟ್ರಿ ಕಾರ್ ಮಾರಾಟಗಾರ ಹಾಗೂ ಸ್ವಚ್ಛತಾ ಸಿಬ್ಬಂದಿ ವಿರುದ್ಧ ರೈಲ್ವೆ ಆಸ್ತಿಗೆ ಹಾನಿ ಹಾಗೂ ಸೀಟುಗಳನ್ನು ವಿರೂಪಗೊಳಿಸಿದ ಆರೋಪದಡಿ ಪ್ರಕರಣ ದಾಖಲಿಸಿದೆ.

ನಿತೀಶ್ ಮೋಡನ್‌ವಾರ್, ಫತೇಕ್ರಿಷ್ಣ, ಆಯುಷ್ ಭಾರತಿ, ಸಾಜಿದ್ ಅಹ್ಮದ್, ಸರ್ವಾನ್, ಓಂಕಾರ್, ಸಂದೀಪ್ ಹಾಗೂ ಧೀರಜ್ ಕುಮಾರ್ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

ಈ ಘಟನೆಯ ಬಗ್ಗೆ ಸ್ಪಷ್ಟನೆ ಕೋರಿ ರೈಲು ಸೂಪರಿಂಟೆಂಡೆಂಟ್ ಸೇರಿದಂತೆ ಇಬ್ಬರು ಅಧಿಕಾರಿಗಳಿಗೆ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು (CTM) ನೋಟಿಸ್ ಜಾರಿ ಮಾಡಿದ್ದಾರೆ.

ಐಆರ್‌ಸಿಟಿಸಿ ಹಾಗೂ ಬಿಎಚ್‌ಎಸ್ ನೌಕರರು ಹೋಳಿ ಆಚರಣೆಯಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಸಹಾಯಕ ವಾಣಿಜ್ಯ ವ್ಯವಸ್ಥಾಪಕ (ACM) ಸಂತೋಷ್ ತ್ರಿಪಾಠಿ ಖಚಿತಪಡಿಸಿದ್ದಾರೆ. ಹೋಳಿ ಬಣ್ಣಗಳಿಂದ ಸೀಟುಗಳು ಹಾಳಾಗಿದ್ದು, ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಘಟನೆಯಿಂದ ರೈಲ್ವೆ ಸಿಬ್ಬಂದಿಯ ನಡವಳಿಕೆ ಹಾಗೂ ರೈಲು ಸೇವೆಗಳಲ್ಲಿನ ನಿಯಮ ಉಲ್ಲಂಘನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read