BREAKING: ಬಿಹಾರದಲ್ಲಿ ಘೋರ ದುರಂತ: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ 8 ಜನ ಸಾವು

ಪಾಟ್ನಾ: ಬಿಹಾರದಲ್ಲಿ ಡಿಜೆ ವಾಹನವು ಹೈ-ಟೆನ್ಷನ್ ವೈರ್‌ಗೆ ತಾಗಿ ವಿದ್ಯುತ್ ಸ್ಪರ್ಶಿಸಿ 8 ಮಂದಿ ಸಾವು ಕಂಡಿದ್ದಾರೆ. ಅವಘಡದಲ್ಲಿ ಹಲವರು ಗಾಐಗೊಂಡಿದ್ದಾರೆ.

ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಹೈಟೆನ್ಶನ್ ವಿದ್ಯುತ್ ತಂತಿಗೆ ಡಿಜೆ ವಾಹನ ಸಿಕ್ಕಿಹಾಕಿಕೊಂಡ ಪರಿಣಾಮ ಕನಿಷ್ಠ ಎಂಟು ಕನ್ವರ್ ಯಾತ್ರಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸದರ್ ಎಸ್‌ಡಿಪಿಒ ಹಾಜಿಪುರ ಓಂಪ್ರಕಾಶ್ ಪ್ರಕಾರ, ಡಿಜೆ ವಾಹನದ ಎತ್ತರವು ತುಂಬಾ ಎತ್ತರವಾಗಿತ್ತು. ಅದು ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ಎಂಟು ಕನ್ವರ್ ಯಾತ್ರಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಯಾತ್ರಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
https://twitter.com/ANI/status/1820253347435409704

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read