ಕಸಕ್ಕೆ ʻಒಂದು ಕೋಟಿʼ ರೂಪಾಯಿ ಹಾಕಿದ ಅಜ್ಜಿ…..!

सांकेतिक तस्वीर (फोटो- Freepik)

ನಾವು ಮಾಡುವ ಸಣ್ಣ ತಪ್ಪು ನಮ್ಮ ಇಡೀ ಜೀವನವನ್ನೇ ಹಾಳು ಮಾಡುತ್ತದೆ. ಅರೆ ಕ್ಷಣದ ತಪ್ಪಿಗೆ ಅಥವಾ ನಿರ್ಲಕ್ಷ್ಯಕ್ಕೆ ಜೀವನ ಪರ್ಯಂತ ಕಷ್ಟದಲ್ಲಿ ಕೈತೊಳೆಯಬೇಕಾಗುತ್ತದೆ. ಇದಕ್ಕೆ ಈ ಅಜ್ಜಿ ಉತ್ತಮ ನಿದರ್ಶನ. 1991ನೇ ಇಸವಿಯಲ್ಲಿ ಅಜ್ಜಿ ಮಾಡಿದ ತಪ್ಪಿಗೆ ಈಗ್ಲೂ ಆಕೆ ನೋವು ತಿನ್ನುತ್ತಿದ್ದಾಳೆ. ಬಡತನದಲ್ಲಿ ಜೀವನ ಸಾಗಿಸುವಂತಾಗಿದೆ.

ಆ ಅಜ್ಜಿ ಹೆಸರು ಜಾನೆಟ್ ವ್ಯಾಲೆಂಟಿ. ಆಕೆ ನ್ಯೂಯಾರ್ಕ್ ನಿವಾಸಿ. ವಯಸ್ಸು 77 ವರ್ಷ. 30 ವರ್ಷಗಳ ಹಿಂದೆ ಆಕೆಗೆ ಬರಬೇಕಿದ್ದ ಸುಮಾರು ಒಂದು ಕೋಟಿಗಿಂತ ಹೆಚ್ಚು ಹಣ ಕೈತಪ್ಪಿ ಹೋಗಿದೆ. ಹಾಗಾಗಿ ಜಾನೆಟ್ ವ್ಯಾಲೆಂಟಿ ಈಗ್ಲೂ ಬಡತನದಲ್ಲಿ ದಿನ ಕಳೆಯುತ್ತಿದ್ದಾಳೆ.

ಜಾನೆಟ್ ವ್ಯಾಲೆಂಟಿ ಪತಿ 1984ರಲ್ಲಿ ಸಾವನ್ನಪ್ಪಿದ್ದ. ಎರಡು ಮಕ್ಕಳ ಜೊತೆ ಸಂಸಾರ ನಡೆಸುವುದು ವ್ಯಾಲೆಂಟಿಗೆ ಕಷ್ಟವಾಗಿತ್ತು. 1991 ಜುಲೈ 17ರಂದು ಗ್ರಾನೈಟ್‌ವಿಲ್ಲೆಯಲ್ಲಿ ಡೆಲಿಕಾಟೆಸೆನ್ ಜೆ.ಎನ್.ಜೆ 1 ಡಾಲರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಲಾಟರಿ ಖರೀದಿ ಮಾಡಿದ ನಂತ್ರ ಫ್ರೆಂಡ್ ಜೊತೆ ವೀಕೆಂಡ್ ಗೆ ಹೋಗಿದ್ದ ಲ್ಯಾಲೆಂಟಿಗೆ ಸ್ನೇಹಿತರೊಬ್ಬರು ಲಾಟರಿ ವಿನ್ ಆಗಿರುವ ವಿಷ್ಯ ಹೇಳಿದ್ರು.

ಮನೆಗೆ ಬಂದ ವ್ಯಾಲೆಂಟಿ ಲಾಟರಿ ಟಿಕೆಟ್ ಹುಡುಕಾಟ ನಡೆಸಿದ್ದಾರೆ. ಟಿಕೆಟನ್ನು ಕಸಕ್ಕೆ ಹಾಕಿರುವುದು ಕೊನೆಯಲ್ಲಿ ನೆನಪಿಗೆ ಬಂದಿದೆ. ಕಸ ಹಾಕ್ತಿದ್ದ ಜಾಗಕ್ಕೆ ಹೋಗಿ ಹುಡುಕಿದ್ದಾಳೆ. ದುರಾದೃಷ್ಟವಶಾತ್ ಎಂದೂ ಕಸ ಹಾಕದ ಪಕ್ಕದ ಮನೆಯವರು ಕೂಡ ಅಂದು ಕಸ ಹಾಕಿದ್ದರಿಂದ ಕಸದ ಗಾಡಿ, ಕಸವನ್ನು ತೆಗೆದುಕೊಂಡು ಹೋಗಿದೆ. ಟಿಕೆಟ್ ಹುಡುಕಲು ಸಾಕಷ್ಟು ಪ್ರಯತ್ನ ನಡೆಸಿದ್ರೂ ವ್ಯಾಲೆಂಟಿ ವಿಫಲವಾಗಿದ್ದಾಳೆ. ಟಿಕೆಟ್ ಇಲ್ಲದೆ ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಲಾಟರಿ ಟಿಕೆಟ್ ಅದೃಷ್ಟ ತಂದಿದ್ರೂ ಅದನ್ನು ಪಡೆಯುವ ಭಾಗ್ಯ ವ್ಯಾಲೆಂಟಿಗೆ ಸಿಗಲಿಲ್ಲ. ಆಕೆ ಬರೋಬ್ಬರಿ ಒಂದು ಕೋಟಿ ೨೦ ಲಕ್ಷ ರೂಪಾಯಿಯನ್ನು ಕಳೆದುಕೊಂಡಳು.

ಅಲ್ಲಿನ ರಾಜ್ಯ ಲಾಟರಿ ನಿಯಮದ ಪ್ರಕಾರ, ವಿಜೇತರು ಒಂದು ವರ್ಷದವರೆಗೆ ಟಿಕೆಟ್ ನೀಡಲು ಅವಕಾಶವಿದೆ. ಒಂದು ವರ್ಷದ ನಂತ್ರ ಹಣವನ್ನು ವಾಪಸ್ ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ. ವ್ಯಾಲೆಂಟಿ ಈಗ್ಲೂ ನಿರಾಸೆಗೊಂಡಿಲ್ಲ. ಈಗ್ಲೂ ಟಿಕೆಟ್ ಖರೀದಿ ಮಾಡ್ತಾಯಿದ್ದು, ಒಂದಲ್ಲ ಒಂದು ದಿನ ಹಣ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read