BIG UPDATE : ಕಜಕಿಸ್ತಾನದಲ್ಲಿ ವಿಮಾನ ಪತನಗೊಂಡು 60 ಪ್ರಯಾಣಿಕರು ಸಾವು : ಭಯಾನಕ ವಿಡಿಯೋ ವೈರಲ್ |WATCH VIDEO

ಕಜಕಿಸ್ತಾನದಲ್ಲಿ ವಿಮಾನ ಪತನಗೊಂಡು 60  ಪ್ರಯಾಣಿಕರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಘಟನೆಯ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಜಕಿಸ್ತಾನದ ಅಕ್ಟೌ ವಿಮಾನ ನಿಲ್ದಾಣದ ಬಳಿ ಬುಧವಾರ ತುರ್ತು ಭೂಸ್ಪರ್ಶ ಮಾಡುವಾಗ 72 ಜನರನ್ನು ಹೊತ್ತ ವಿಮಾನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12 ಮಂದಿ ಬಚಾಚ್ ಆಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಜೆರ್ಬೈಜಾನ್ ಏರ್ಲೈನ್ಸ್ ವಿಮಾನ ಜೆ 2-8243 ಬಾಕುದಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು, ಆದರೆ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ. ವಿಮಾನದಲ್ಲಿ 72  ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಎತ್ತರವನ್ನು ಕಳೆದುಕೊಂಡು ವೇಗವಾಗಿ ಇಳಿಯುವ ಕ್ಷಣವನ್ನು ವೀಡಿಯೊ ತೋರಿಸುತ್ತದೆ, ಕೂಡಲೇ ವಿಮಾನ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗುತ್ತದೆ. ವಿಮಾನ ಅಪಘಾತಕ್ಕೀಡಾದಾಗ, ಸ್ಥಳದಲ್ಲೇ ಹೊಗೆ ಏಳುತ್ತಿರುವುದು ಕಂಡುಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read