70 ವರ್ಷದ ಮಾವನಿಗೆ ಮನಸ್ಸು ಕೊಟ್ಟಿದ್ದಾಳೆ 28 ವರ್ಷದ ಸೊಸೆ; ಗೋರಖ್‌ಪುರದಲ್ಲೊಂದು ವಿಭಿನ್ನ ಲವ್‌ ಸ್ಟೋರಿ….!

ಗೋರಖ್‌ಪುರ ಜಿಲ್ಲೆಯಲ್ಲಿ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ.  ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ 70 ವರ್ಷದ ಕೈಲಾಶ್ ಯಾದವ್ ಮದುವೆ ಆತನ ಸೊಸೆ ಪೂಜಾ ಜೊತೆ ನೆರವೇರಿದೆ. ಈ ವಿಚಿತ್ರ ಜೋಡಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮಾವ ಮತ್ತು ಸೊಸೆಯ ಈ ವಿವಾಹ ಗ್ರಾಮದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಕೈಲಾಶ್ ಯಾದವ್, ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮನ್‌ ಆಗಿ ಕೆಲಸ ಮಾಡ್ತಾನೆ. ಈತನ ಪತ್ನಿ 12 ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ. ಕೈಲಾಶ್‌ಗೆ ನಾಲ್ವರು ಮಕ್ಕಳು. ಮೂರನೇ ಮಗನ ಪತ್ನಿಯೇ ಈ ಪೂಜಾ. ಆದರೆ ಪೂಜಾಳ ಪತಿ ಕೂಡ ಈಗಾಗ್ಲೇ ಮೃತಪಟ್ಟಿದ್ದಾನೆ. ಅದಾದ ಬಳಿಕ ಪೂಜಾ ಬೇರೊಬ್ಬನನ್ನು ಮದುವೆಯಾಗಿದ್ದಳು. ಆದರೆ ಆಕೆಗೆ ಹೊಸ ಸಂಸಾರ ಇಷ್ಟವಾಗಿರಲಿಲ್ಲ.

ಹಾಗಾಗಿ ಮರಳಿ ಮಾವ ಕೈಲಾಶ್‌ ಮನೆಗೇ ಬಂದಿದ್ದಾಳೆ. ಈ ಸಮಯದಲ್ಲಿ ಮಾವ ಹಾಗೂ ಸೊಸೆ ಮಧ್ಯೆ ಪ್ರೇಮಾಂಕುರವಾಗಿದೆ. ಇಬ್ಬರೂ ವಯಸ್ಸು ಮತ್ತು ಸಮಾಜವನ್ನು ಲೆಕ್ಕಿಸದೆ ಪರಸ್ಪರ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read