BIG NEWS: ಉಸಿರಾಟ ಸಂಬಂಧಿತ ಸೋಂಕು; ಒಂದೇ ದಿನದಲ್ಲಿ 7 ಮಕ್ಕಳು ಸಾವು

ಕೋಲ್ಕತ್ತಾ: ಉಸಿರಾಟ ಸಂಬಂಧಿತ ಸೋಂಕು ಆರಂಭವಾಗಿದ್ದು, ಈ ವಿಚಿತ್ರ ಸಮಸ್ಯೆಗೆ ಒಂದೇ ದಿನದಲ್ಲಿ 7 ಮಕ್ಕಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಅಡೆನೋವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ಸೋಂಕಿಗೆ ಒಂದೇ ದಿನದಲ್ಲಿ 7 ಮಕ್ಕಳು ಬಲಿಯಾಗಿದ್ದಾರೆ. ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ 5 ಮಕ್ಕಳು ಹಾಗೂ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಮಕ್ಕಳು ಬೇರೆ ಬೇರೆ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅಡೆನೋವೈರಸ್ ನಿಂದ ಸಾವು ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಕೆಲ ಸಮಯ ಬೇಕು ಎಂದು ವೈದಾಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕೂಡ ಉಸಿರಾಟದ ಸಮಸ್ಯೆಯಿಂದ ಐವರು ಮಕ್ಕಳು ಸಾವನ್ನಪ್ಪಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read