67ರ ಹರೆಯದಲ್ಲೂ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಈ ಶ್ರೀಮಂತ ಉದ್ಯಮಿ…….!

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಸಿರಿವಂತ ಉದ್ಯಮಿ ಬಿಲ್ ಗೇಟ್ಸ್. ಇವರು ತಮ್ಮ 67 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೂಲಗಳ  ಪ್ರಕಾರ ಬಿಲ್ ಗೇಟ್ಸ್ 60 ವರ್ಷ ವಯಸ್ಸಿನ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಹಾಗೂ ವಿಧವೆ ಪೌಲಾ ಹರ್ಡ್‌ ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಪೌಲಾ, ಮಾಜಿ ಒರಾಕಲ್ ಸಿಇಓ ಮಾರ್ಕ್ ಹರ್ಡ್ ಅವರ ಪತ್ನಿ. ಮಾರ್ಕ್‌ ಈಗಾಗ್ಲೇ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ಇಬ್ಬರೂ ಟೆನಿಸ್ ಅನ್ನು ತುಂಬಾ ಇಷ್ಟಪಡುತ್ತಾರೆ. WTA ಸೆಮಿಫೈನಲ್ ಪಂದ್ಯದಲ್ಲೂ ಇಬ್ಬರೂ ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ. ಫೋಟೋ ಕೂಡ ವೈರಲ್ ಆಗಿತ್ತು. ಗೇಟ್ಸ್‌ ಹಾಗೂ ಪೌಲಾ ಕಳೆದ ಒಂದು ವರ್ಷದಿಂದಲೂ ಡೇಟಿಂಗ್‌ ಮಾಡ್ತಿದ್ದಾರಂತೆ. ಆದ್ರೆ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಳೆದ ತಿಂಗಳು ಪೌಲಾ ಹರ್ಡ್, ಬಿಲ್‌ ಗೇಟ್ಸ್‌ರೊಂದಿಗೆ ಸಿಡ್ನಿಗೆ ಬಂದಿದ್ದರು. ಅಲ್ಲಿ ಬಿಲ್‌ ಗೇಟ್ಸ್‌, ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗಷ್ಟೆ ಬಿಲ್‌ ಗೇಟ್ಸ್‌ ಮತ್ತು ಅವರ ಪತ್ನಿ ಮೆಲಿಂದಾ ಫ್ರೆಂಚ್‌ರ 27 ವರ್ಷಗಳ ದಾಂಪತ್ಯ ಮುರಿದು ಬಿದ್ದಿತ್ತು. ಈಗಾಗ್ಲೇ ಬಿಲ್‌ ಗೇಟ್ಸ್‌ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read