BIG NEWS: ಬಿಸಿಗಾಳಿ: 90 ಭಾರತೀಯರು ಸೇರಿ 645 ಹಜ್ ಯಾತ್ರಿಕರು ಸಾವು

ಮುಸ್ಲಿಂರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾದ ಹಜ್ ಯಾತ್ರೆಗೆ ತೆರಳಿದ್ದ 645 ಯಾತ್ರಿಕರು ಬಿಸಿ ಗಾಳಿಯಿಂದ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಉಷ್ಣಗಾಳಿಯಿಂದಾದ ಆರೋಗ್ಯ ಸಮಸ್ಯೆಯಿಂದಾಗಿ ಈ ದುರಂತ ಸಂಭವಿಸಿದ್ದು, ಅವರಲ್ಲಿ 90 ಜನರು ಭಾರತೀಯ ಮೂಲದವರು ಎಂದು ತಿಳಿದುಬಂದಿದೆ.

ಸೌದಿ ಸ್ಟೇಟ್ ಟಿವಿ ವರದಿ ಪ್ರಕಾರ ಮೆಕ್ಕಾದಲ್ಲಿನ ಗ್ರ್ಯಾಂಡ್ ಮಸೀದಿಯ ನೆರಳಿನಲ್ಲಿ 51.8 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆಯಾಗಿದೆ.

ಜರ್ನಲ್ ಆಫ್ ಟ್ರಾವೆಲ್ ಅಂಡ್ ಮೆಡಿಸಿನ್‌ನ 2024 ರ ಅಧ್ಯಯನದ ಪ್ರಕಾರ ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಶಾಖವನ್ನು ನಿಯಂತ್ರಿಸಲು ಎಲ್ಲಾ ತಂತ್ರಗಳನ್ನು ಮೀರಿಸುತ್ತದೆ. ಸೌದಿ ಅರೇಬಿಯಾದಲ್ಲಿ ತಾಪಮಾನವು ಹೆಚ್ಚಾಗುತ್ತಿದ್ದಂತೆ, ಹಜ್ ಯಾತ್ರಿಕರು ತೀವ್ರ ಅಪಾಯವನ್ನು ಎದುರಿಸುತ್ತಿದ್ದು, ಈವರೆಗೆ ಒಟ್ಟು 645 ಯಾತ್ರಿಕರು ಸಾವನ್ನಪ್ಪಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read