ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಇದ್ರ ನಂತ್ರ ವಯಸ್ಕ ಮನರಂಜನಾ ವೇದಿಕೆಯೊಂದು, ಫ್ರೆಂಚ್ ಪೋಲ್ ವಾಲ್ಟರ್ ಆಂಥೋನಿ ಅಮ್ಮಿರತಿಯನ್ನು ಸಂಪರ್ಕಿಸಿದೆ. ಅವರಿಗೆ 250,000 ಡಾಲರ್ ಹಣ ನೀಡುವುದಾಗಿ ಹೇಳಿದೆ. ಈ ಘಟನೆಯು ಅಮೀರತಿ ಅವರ ವೈರಲ್ ವಿಡಿಯೋ ನಂತ್ರ ಘಟಿಸಿದೆ.
ಫ್ರೆಂಚ್ ಪೋಲ್ ವಾಲ್ಟರ್ ಆಂಆಥೋನಿ ಅಮ್ಮಿರತಿ ಅವರು ಆಟ ಆಡುವಾಗ ಅವರ ಖಾಸಗಿ ಅಂಗ ಹಗ್ಗಕ್ಕೆ ಸಿಕ್ಕಿತ್ತು. ಇದ್ರಿಂದಾಗಿ ಅವರು ಆಟವನ್ನು ಪೂರ್ಣಗೊಳಿಸಲು ಸಾಧ್ಯವಾಗ್ಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ್ಮೇಲೆ ಅಮ್ಮಿರತಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಅದಕ್ಕೆ ಕಾರಣ ಅವರನ್ನು ವಯಸ್ಕ ಮನರಂಜನಾ ಕಂಪನಿಯೊಂದು ಸಂಪರ್ಕಿಸಿದೆ.
ಫ್ರೆಂಚ್ ಪೋಲ್-ವಾಲ್ಟರ್ ಆಗಿರುವ ಆಂಥೋನಿ ಅಮ್ಮಿರತಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಪ್ರವೇಶಪಡೆದಿದ್ದರು. ಆದರೆ ಅರ್ಹತಾ ಸುತ್ತಿನ ಹಿನ್ನಡೆಯ ನಂತರ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜಿಗಿತವನ್ನು ಪೂರ್ಣಗೊಳಿಸಿದ್ದರಾದ್ರೂ ಅವರ ಖಾಸಗಿ ಭಾಗಗಳು ಅಡ್ಡಪಟ್ಟಿಯನ್ನು ಸ್ಪರ್ಶಿಸಿತ್ತು. ಇದ್ರಿಂದಾಗಿ ಅವರು ಅನರ್ಹರಾದ್ರು. ಒಲಂಪಿಕ್ ಚಿನ್ನದ ಪದಕ ಗೆಲ್ಲಲಾಗದಿದ್ದರೂ ಅಮ್ಮಿರತಿ ತನ್ನ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ರಂಜಿಸಬಹುದೆಂದು ವಯಸ್ಕ ಮನರಂಜನಾ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅವರಿಗೆ ಕೆಲಸದ ಆಫರ್ ನೀಡಿದೆ.
French athlete Anthony Ammirati failed the 5.70 height pole vault because of his asset. #IKYK #Paris2024 https://t.co/qWnr1QbFzy
— @pauloinmanila and 99 others (@pauloMDtweets) August 3, 2024