ಬೆಂಗಳೂರಿನಲ್ಲಿ 60.48 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ. ಜಗದೀಶ್

ಬೆಂಗಳೂರು ನಗರ ಜಿಲ್ಲೆ : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 60.48 ಕೋಟಿ ಅಂದಾಜು ಮೌಲ್ಯದ ಒಟ್ಟು 9 ಎಕರೆ 0.16 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.

ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಕುಂಟೆ, ಕುಂಡ್ಲು ಕೆರೆ, ಸರ್ಕಾರಿ ಕರೆ, ಕುಂಟೆ, ರಾಜಕಾಲುವೆ, ಸ್ಮಶಾನ, ಬಂಡಿದಾರಿ, ಗುಂಡುತೋಪು, ಸರ್ಕಾರಿ ಖರಾಬು, ಸರ್ಕಾರಿ ಸೇಂದಿವನ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮದ ಸ.ನಂ 193ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.50 ಲಕ್ಷಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಸ.ನಂ 40 ರ ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 2.00ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ವಾಲೇಪುರ ಗ್ರಾಮದ ಸ.ನಂ. 29 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.75 ಲಕ್ಷಗಳಾಗಿರುತ್ತದೆ.

ಆನೇಕಲ್ ತಾಲ್ಲೂಕಿನ ಜಿಗಣಿ-1 ಹೋಬಳಿಯ ನಂಜಾಪುರ ಗ್ರಾಮದ ಸ.ನಂ. 27ರ ಕುಂಡ್ಲು ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.16 ಲಕ್ಷಗಳಾಗಿರುತ್ತದೆ. ಜಿಗಣಿ-2 ಹೋಬಳಿಯ ಬನ್ನೇರುಘಟ್ಟ ಗ್ರಾಮದ ಸ.ನಂ 169 ರ ಸರ್ಕಾರಿ ಕರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.17 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.70 ಕೋಟಿಗಳಾಗಿರುತ್ತದೆ. ಸರ್ಜಾಪುರ ಹೋಬಳಿಯ ಚಿಕ್ಕನಹಳ್ಳಿ ಕಾಮನಹಳ್ಳಿ ಗ್ರಾಮದ ಸ.ನಂ 19 ರ ಮಧ್ಯದಲ್ಲಿರುವ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.01 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.04 ಲಕ್ಷಗಳಾಗಿರುತ್ತದೆ. ಸರ್ಜಾಪುರ-2 ಹೋಬಳಿಯ ಗೂಳಿಮಂಗಳ ಗ್ರಾಮದ ಸ.ನಂ 9,10,11, 12 ರ ರಾಜ ಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.35 ಲಕ್ಷಗಳಾಗಿರುತ್ತದೆ. ಕಸಬಾ-1 ಹೋಬಳಿಯ ಮೆಣಸಿಗನಹಳ್ಳಿ ಗ್ರಾಮದ ಸ.ನಂ 93ರ ಕರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.08 ಲಕ್ಷಗಳಾಗಿರುತ್ತದೆ. ಕಸಬಾ-2 ಹೋಬಳಿಯ ಅವಡದೇನಹಳ್ಳಿ ಗ್ರಾಮದ ಸ.ನಂ 109ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.09 ಲಕ್ಷಗಳಾಗಿರುತ್ತದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಪುರದಪಾಳ್ಯ ಗ್ರಾಮದ ಸ.ನಂ 14/14,14/16ರ ಬಂಡಿದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.04ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.35 ಲಕ್ಷಗಳಾಗಿರುತ್ತದೆ. ಉತ್ತರಹಳ್ಳಿ ಹೋಬಳಿಯ ಯಲಚೇನಹಳ್ಳಿ ಗ್ರಾಮದ ಸ.ನಂ 45ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 6.00 ಕೋಟಿಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ಕೆಂಚನಪುರ ಗ್ರಾಮದ ಸ.ನಂ 9 ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.75 ಕೋಟಿಗಳಾಗಿರುತ್ತದೆ.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ-3 ಹೋಬಳಿಯ ಅವ್ವೇರಹಳ್ಳಿ ಗ್ರಾಮದ ಸ.ನಂ 46ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.36 ಲಕ್ಷಗಳಾಗಿರುತ್ತದೆ. ದಾಸನಪುರ-2 ಹೋಬಳಿಯ ಕುದುರೆಗೆರೆ ಗ್ರಾಮದ ಸ.ನಂ 8ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 1 ಎಕರೆ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 7.50 ಕೋಟಿಗಳಾಗಿರುತ್ತದೆ. ದಾಸನಪುರ-2 ಹೋಬಳಿಯ ಲಕ್ಷ್ಮಿಪುರ ಗ್ರಾಮದ ಸ.ನಂ 88ರ ಸರ್ಕಾರಿ ಸೇಂದಿವನ ಒಟ್ಟು ಒತ್ತುವರಿ ತೆರವುಗೊಳಿಸಿರುವ 4 ಎಕರೆಗಳಾಗಿದ್ದು ಅಂದಾಜು ಮೌಲ್ಯ 24.00 ಕೋಟಿಗಳಾಗಿರುತ್ತದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟಿ ಗ್ರಾಮದ ಸಂ.ನಂ 55ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.85 ಲಕ್ಷಗಳಾಗಿರುತ್ತದೆ. ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮದ ಸಂ.ನಂ 259 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.28ಗುಂಟೆಗಳಾಗಿದ್ದು ಅಂದಾಜು ಮೌಲ್ಯ 14.00 ಕೋಟಿಗಳಾಗಿರುತ್ತದೆ.ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read