50 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನವು ಸೋಮವಾರ ಚೀನಾದ ಗಡಿಯ ಸಮೀಪ ದೇಶದ ಫಾರ್ ಈಸ್ಟರ್ನ್ ಪ್ರದೇಶದಲ್ಲಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದೆ.
ವಾಯು ಸಂಚಾರ ನಿಯಂತ್ರಕರು ವಿಮಾನದ ಹಾರಾಟದ ಮಧ್ಯದಲ್ಲಿ ಸಂಪರ್ಕ ಕಳೆದುಕೊಂಡರು, ಮತ್ತು ನಿಮಿಷಗಳ ನಂತರ, ರಕ್ಷಣಾ ಸಿಬ್ಬಂದಿ ಉರಿಯುತ್ತಿರುವ ವಿಮಾನದ ಭಾಗಗಳನ್ನು ಪತ್ತೆಹಚ್ಚಿದರು. ಅಮುರ್ ಪ್ರದೇಶದ ಟಿಂಡಾ ಪಟ್ಟಣದಲ್ಲಿ ಇಳಿಯುವಾಗ ಪೈಲಟ್ ದೋಷವು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವಿಶ್ಲೇಷಣೆ ಸೂಚಿಸುತ್ತದೆ.
5 kids among scores MISSING as passenger plane disappears off radar
— RT (@RT_com) July 24, 2025
Massive hunt for liner underway pic.twitter.com/i5zj3IwDwX
ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ An-24 ವಿಮಾನವು, ಟಿಂಡಾ ವಿಮಾನ ನಿಲ್ದಾಣಕ್ಕೆ ಆರಂಭಿಕ ಲ್ಯಾಂಡಿಂಗ್ ವಿಫಲವಾದ ನಂತರ ಎರಡನೇ ಲ್ಯಾಂಡಿಂಗ್ಗೆ ಪ್ರಯತ್ನಿಸುವಾಗ ರಾಡಾರ್ನಿಂದ ಕಣ್ಮರೆಯಾಯಿತು ಎಂದು ಸ್ಥಳೀಯ ತುರ್ತು ಸಚಿವಾಲಯ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 50 ಮಂದಿ ಪ್ರಯಾಣಿಕರು ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.