ಜೂನ್ 27ರಂದು ತೆರೆಕಂಡಿದ್ದ ಡಾರ್ಲಿಂಗ್ ಪ್ರಭಾಸ್ ಅಭಿನಯದ ”ಕಲ್ಕಿ 2898” ಚಿತ್ರ ಇದೀಗ 50 ದಿನಗಳನ್ನು ಪೂರೈಸಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಸೇರಿದಂತೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲಹಾಸನ್, ದಿಶಾ ಪಟಾನಿ, ಬ್ರಹ್ಮಾನಂದಂ, ರಾಜೇಂದ್ರ ಪ್ರಸಾದ್, ಶೋಭನಾ ಶಂಬಲ, ಪಶುಪತಿ, ಅನ್ನಾ ಬೆನ್, ಕಾವ್ಯ ರಾಮಚಂದ್ರನ್, ವೆಂಕಟ ರಮಣ, ಹರ್ಷಿತ್ ರೆಡ್ಡಿ, ಬಣ್ಣ ಹಚ್ಚಿದ್ದು, ಕೃಷ್ಣಕುಮಾರ್, ಸೇರಿದಂತೆ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ಮಾಳವಿಕಾ ನಾಯರ್, ಮೃಣಾಲ್ ಠಾಕೂರ್ , SS ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈ ಜಯಂತಿ ಫಿಲಂಸ್ ಬ್ಯಾನರ್ ನಲ್ಲಿ ಸಿ.ಅಸ್ವಾನಿ ದತ್, ಸ್ವಪ್ನಾ ದತ್, ಪ್ರಿಯಾಂಕಾ ದತ್, ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ನೀಡಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ.
https://twitter.com/telugufilmnagar/status/1823998737233883628